ಕೋಲ್ಕತ್ತ: ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದ ‘ಜಾಲ್ಮುರಿ’ ಅಂಗಡಿಯ ಮಾಲೀಕನಿಗೆ ಜೀವ ಬೆದರಿಕೆ ಬಂದಿರುವ ಕಾರಣ ಶನಿವಾರ ಭದ್ರತೆ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 19ರಂದು ಜಾರ್ಗ್ರಾಮ ಪಟ್ಟಣದ ರಾಜ್ ಕಾಲೇಜ್ ವೃತ್ತದ ಬಳಿ ಬಿಕ್ರಮ್ ಕುಮಾರ್ ಸೌ ಅವರು ನಡೆಸುತ್ತಿದ್ದ ಅಂಗಡಿಯಲ್ಲಿ ಪ್ರಧಾನಿ ಮೋದಿ ಜಾಲ್ಮುರಿ ತಿಂದಿದ್ದರು.

‘ಮೇ 17ರಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದವರೆಂದು ಹೇಳಿಕೊಂಡು ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿವೆ. ಕರೆ ಮಾಡಿದವರು ನನ್ನನ್ನು ಕೊಲೆ ಮಾಡುವುದಾಗಿಯೂ, ಅಂಗಡಿಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿಯೂ ಬೆದರಿಸುತ್ತಿದ್ದಾರೆ’ ಎಂದು ಜಾರ್ಗ್ರಾಮ ಪೊಲೀಸ್ ಠಾಣೆಗೆ ಸಲ್ಲಿಸಿರುವ ಲಿಖಿತ ದೂರಿನಲ್ಲಿ ಬಿಕ್ರಮ್ ಅವರು ಹೇಳಿದ್ದಾರೆ.

ಅಲ್ಲದೆ, ಕೆಲವರು ವಾಟ್ಸ್ಆ್ಯಪ್ ವಿಡಿಯೊ ಕಾಲ್ಗಳಲ್ಲಿ ಬಂದೂಕುಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಪದೇ ಪದೇ ಬೆದರಿಕೆ ಕರೆಗಳು ಬಂದ ನಂತರ ನಾನು ಮತ್ತು ನನ್ನ ಕುಟುಂಬಸ್ಥರು ಭಯಭೀತರಾಗಿದ್ದೇವೆ. ಅಲ್ಲದೆ, ಈ ಭಯದಿಂದ ಕೆಲವು ದಿನ ಅಂಗಡಿಯನ್ನೂ ಮುಚ್ಚಿದ್ದೆ’ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ದೂರು ದಾಖಲಾಗಿದ್ದು, ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆದರಿಕೆ ಕರೆ ಮತ್ತು ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಸೈಬರ್ ತಜ್ಞರು ಸಹಾಯ ಮಾಡುತ್ತಿದ್ದಾರೆ ಅವರು ಹೇಳಿದ್ದಾರೆ.

ಬೆದರಿಕೆ ಕಾರಣದಿಂದ ಅಧಿಕಾರಿಗಳು ಬಿಕ್ರಮ್ ಅವರ ಅಂಗಡಿಯ ಹೊರಗೆ ನಾಲ್ವರು ಸಿಎಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ ಮತ್ತು ಆ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.