ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಅವರು 132ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಛತ್ತೀಸಗಢದ ಕೊರಿಯಾ ಜಿಲ್ಲೆಯ ರೈತರು ಅಳವಡಿಸಿಕೊಂಡಿರುವ ನೀರಿನ ಸಂರಕ್ಷಣಾ ವಿಧಾನ ಕುರಿತು ಶ್ಲಾಘಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ವಿಷ್ಣು ದೇವ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಷ್ಣು ದೇವ್ ಸಾಯಿ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನೀರಿನ ಸಂರಕ್ಷಣೆ ಎಂಬುದು ಸಾಮೂಹಿಕ ಆಂದೋಲನವಾಗಿ ಬದಲಾಗಿದೆ. ರಾಜ್ಯದಲ್ಲಿ ನೀರಿನ ಸಂರಕ್ಷಣೆ ವಿಧಾನಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದ್ದಾರೆ.
.ವರದಕ್ಷಿಣೆ ಕಿರುಕುಳ: ಅತ್ತೆ–ಮಾವ, ನಾದಿನಿ ನಿರಾಳ.ಅಮಿತ್ ಶಾ ಎಸಗಿರುವ ಕೃತ್ಯಗಳಿಗೆ ಆರೋಪಪಟ್ಟಿ ದಾಖಲಿಸಬೇಕು: ಮಮತಾ ಬ್ಯಾನರ್ಜಿ .
ಕೊರಿಯಾ ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಗಾಗಿ ‘ಆವಾ ಪಾನಿ ಝೋಂಕಿ‘ ಮಾದರಿ ವಿಧಾನವನ್ನು 1,200ಕ್ಕೂ ರೈತರು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಆ ಭಾಗದ ಅಂತರ್ಜಲ ಮಟ್ಟ ಗಣನೀಯವಾಗಿ ಸುಧಾರಿಸಿದೆ. ಈ ತಳಮಟ್ಟದ ನಾವೀನ್ಯತೆಯು ಇಂದು ದೇಶಕ್ಕೆ ಮಾದರಿಯಾಗಿದೆ ಎಂದು ವಿಷ್ಣು ದೇವ್ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾದ ಸಂಘರ್ಷದ ಕುರಿತು ಪ್ರತಿಕ್ರಿಯಿಸಿರುವ ವಿಷ್ಣು ದೇವ್, ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಅಥವಾ ಎಲ್ಪಿಜಿ ಸಿಲಿಂಡರ್ಗಳ ಕೊರತೆಯಿಲ್ಲ. ಪೂರೈಕೆಯು ಸುಗಮವಾಗಿದೆ. ಜನರು ವದಂತಿಗಳನ್ನು ನಂಬಬಾರದು ಅಥವಾ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದ್ದಾರೆ.

ಮೀನುಗಾರಿಕೆಯಲ್ಲಿ ಸ್ವಾವಲಂಬನೆ, ಫಿಟ್ನೆಸ್ಗೆ ಉತ್ತೇಜನ, ಜನರು ಸಕ್ಕರೆ ಸೇವನೆ ಕಡಿಮೆ ಮಾಡುವುದು, ಕ್ರೀಡೆಗೆ ಆದ್ಯತೆ ಸೇರಿದಂತೆ ಇನ್ನೂ ಅನೇಕ ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಮನ್ ಕಿ ಬಾತ್ನಲ್ಲಿ ಗಮನ ಸೆಳೆದರು.
.ವಿಜಯಪತ್ ಸಿಂಘಾನಿಯಾ: ಸಾಹಸಪ್ರಿಯ, ಜವಳಿ ಉದ್ಯಮದ ದಿಗ್ಗಜ...10 ವರ್ಷದಲ್ಲಿ 10 ಸಾವಿರಕ್ಕೂ ಅಧಿಕ ಮಾವೋವಾದಿಗಳು ಶರಣು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.