ನವದೆಹಲಿ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ಕಲ್ಪಿಸುವ ಉದ್ದೇಶದ ಮಸೂದೆಯನ್ನು ಸೋಲಿಸುವ ಮೂಲಕ ವಿರೋಧ ಪಕ್ಷಗಳು ನಮ್ಮ ಸಂವಿಧಾನಕ್ಕೆ ಅವಮಾನ ಮಾಡಿವೆ. ಮಸೂದೆಗೆ ಸೋಲಾದ ಬಳಿಕ ಸಂಸತ್ನಲ್ಲಿ ಸಂಭ್ರಮಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳಿಗೆ ದೇಶದ ಮಹಿಳೆಯರು ತಕ್ಕ ಉತ್ತರ ಕೊಡುವರು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಮಹಿಳಾ ಮೀಸಲಾತಿ ಕಾಯ್ದೆಗೆ ತಿದ್ದುಪಡಿ, ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ್ದು ಸೇರಿ ಒಟ್ಟು ಮೂರು ಮಸೂದೆಗಳಿಗೆ ಲೋಕಸಭೆಯಲ್ಲಿ ಅಂಗೀಕಾರ ಪಡೆಯುವ ಸರ್ಕಾರದ ಯತ್ನ ವಿಫಲಗೊಳಿಸಿದ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು,‘ವಿರೋಧ ಪಾಳಯ ಅವಕಾಶವಾದಿಗಳ ಗುಂಪು. ವಿಪಕ್ಷಗಳ ನಾಯಕರು ದೇಶದ ಮಹಿಳೆಯರ ಹಿತಾಸಕ್ತಿ ಬಲಿಕೊಟ್ಟು ತಮ್ಮ ಸ್ವಾರ್ಥ ಸಾಧನೆಗೆ ಕೆಲಸ ಮಾಡುತ್ತಾರೆ’ ಎಂದಿದ್ದಾರೆ.

ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರಲ್ಲದೇ, ಮಹಿಳೆಯರಿಗೆ ಶೇ33ರಷ್ಟು ಮೀಸಲಾತಿ ಕಲ್ಪಿಸುವಲ್ಲಿ ಎದುರಾಗುವ ಎಲ್ಲ ಅಡೆತಡೆಗಳನ್ನು ತೊಡೆದು ಹಾಕುವುದಾಗಿ ಹೇಳಿದ್ದಾರೆ.

‘ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳ ಸ್ವಾರ್ಥ ರಾಜಕೀಯವು ಮಹಿಳೆಯರು ತಮ್ಮ ಹಕ್ಕುಗಳಿಂದ ವಂಚಿತವಾಗುವಂತೆ ಮಾಡಿದೆ’ ಎಂದಿದ್ದಾರೆ.

‘ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲುಂಟಾದ ವೇಳೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಹಾಗೂ ಸಮಾಜವಾದಿ ಪಕ್ಷದ ಸಂಸದರು ಚಪ್ಪಾಳೆ ತಟ್ಟಿ, ಸಂಭ್ರಮಿಸಿದರು. ಇದು ದೇಶದ ಮಹಿಳೆಯರ ಆತ್ಮಗೌರವದ ಮೇಲೆ ಮಾಡಿದ ದಾಳಿ. ಅವರು ನ್ಯಾಯಯುತವಾಗಿ ಪಡೆಯಬೇಕಿದ್ದ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ವಿರೋಧ ಪಕ್ಷಗಳ ಸಂಸದರು ಚಪ್ಪಾಳೆ ತಟ್ಟುತ್ತಿದ್ದರು’ ಎಂದಿದ್ದಾರೆ.

‘ಮಹಿಳೆ ಏನನ್ನಾದರೂ ಮರೆತುಬಿಡಬಹುದು, ಆದರೆ, ಆಕೆ ತನಗಾದ ಅನ್ಯಾಯವನ್ನು ಮಾತ್ರ ಎಂದಿಗೂ ಮರೆಯುವುದಿಲ್ಲ’ ಎನ್ನುವ ಮೂಲಕ ವಿರೋಧ ಪಕ್ಷಗಳ ನಾಯಕರಿಗೆ ಎಚ್ಚರಿಸಿದ್ದಾರೆ.

‘ಈ ಪಕ್ಷಗಳ ನಾಯಕರು ಎದುರಾದ ಇಲ್ಲವೇ ಅವರನ್ನು ಹತ್ತಿರದಿಂದ ನೋಡುವ ಸಂದರ್ಭಗಳು ಒದಗಿದಾಗ, ಸಂಸತ್ನಲ್ಲಿ ಈ ನಾಯಕರು ಸಂಭ್ರಮಿಸಿದ್ದನ್ನು, ಮೀಸಲಾತಿ ಸಿಗಲಿದೆ ಎಂದು ತಾವು ಹೊಂದಿದ್ದ ಆಶಾಭಾವವನ್ನು ಹೊಸಕಿ ಹಾಕಿದ್ದನ್ನು ದೇಶದ ಮಹಿಳೆಯರು ನೆನಪಿಸಿಕೊಳ್ಳುವರು’ ಎಂದು ಮೋದಿ ಹೇಳಿದ್ದಾರೆ.

‘21ನೇ ಶತಮಾನದ ಮಹಿಳೆ ವಿರೋಧ ಪಕ್ಷಗಳ ಪ್ರತಿಯೊಂದು ನಡೆಯನ್ನು ಗಮನಿಸುತ್ತಿದ್ದಾಳೆ, ಅವುಗಳ ನಿಜವಾದ ಉದ್ದೇಶಗಳನ್ನು ಗ್ರಹಿಸುವ ಶಕ್ತಿ ಹೊಂದಿದ್ದಾಳೆ ಹಾಗೂ ಈ ಪಕ್ಷಗಳ ಕಾರ್ಯವನ್ನು ಅರ್ಥ ಮಾಡಿಕೊಳ್ಳುತ್ತಾಳೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ’ ಎಂದಿದ್ದಾರೆ

ಮೋದಿ ಭಾಷಣದ ಮುಖ್ಯಾಂಶಗಳು

* ಕಾಂಗ್ರೆಸ್ಸಿಗರು ಕುಟುಂಬದ ಮಹಿಳೆಯರನ್ನು ಬಿಟ್ಟು ಬೇರೆಯವರನ್ನು ಬೆಳೆಸುಲು ಬಯಸುವುದಿಲ್ಲ.

* ಕಾಂಗ್ರೆಸ್ ರಾಷ್ಟ್ರೀಯವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಜೀವಂತವಾಗಿರಲು ಪ್ರಾದೇಶಿಕ ಪಕ್ಷಗಳನ್ನು ಅವಲಂಬಿಸಿದೆ

* ಮಹಿಳಾ ಮೀಸಲಾತಿ ವಿಷಯ ಬಂದಾಗ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ನಿಜವಾದ ಮುಖವನ್ನು ತೋರಿಸಿವೆ.

* ಕಾಂಗ್ರೆಸ್ ಮಹಿಳಾ ಕೋಟಾ ವಿರುದ್ಧ ಸದಾ ಹೋರಾಡುತ್ತಿದೆ. ಮಹಿಳಾ ಕೋಟಾವನ್ನು ತಡೆಯಲು ಕಾಂಗ್ರೆಸ್ ಸುಳ್ಳು ಹೇಳಿದೆ.

* ಬಹಳ ದಿನಗಳಿಂದ ಮಹಿಳೆಯರಿಗೆ ನೀಡಬೇಕಾಗಿದ್ದ ಹಕ್ಕನ್ನು ಈ ಮಸೂದೆ ನೀಡುತ್ತಿತ್ತು. ಮಸೂದೆಯು ಎಲ್ಲ ರಾಜ್ಯಗಳಿಗೆ ದೊಡ್ಡ ಧ್ವನಿಯಾಗುತ್ತಿತ್ತು.

* ತಿದ್ದುಪಡಿ ಮಸೂದೆಯು ಮಹಿಳಯರಿಗೆ ಹಕ್ಕು ನೀಡುತ್ತಿತ್ತು. ಅವರಿಗಿದ್ದ ಅಡೆತಡೆ ನಿವಾರಿಸುತ್ತಿತ್ತು. ಮಹಿಳೆಯರ ಆಕಾಂಕ್ಷೆಗಳ ವಿರುದ್ಧ ವಿಪಕ್ಷಗಳು ಮಹಾಯಜ್ಞ ನಡೆಸಿದವು.

* ವಿರೋಧ ಪಕ್ಷವು ಸಂವಿಧಾನದ ಭಾವನೆಗಳನ್ನು ಅವಮಾನಿಸಿದೆ. ಜನರು ವಿರೋಧ ಪಕ್ಷವನ್ನು ಶಿಕ್ಷಿಸುತ್ತಾರೆ, ಅವರು ಜನರ ಕೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

:* ಸ್ವಾರ್ಥಪರ ರಾಜಕೀಯಕ್ಕಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಎಸ್ಪಿ ಮಹಿಳಾ ಹಕ್ಕುಗಳನ್ನು ನಿರ್ಲಕ್ಷಿಸಿದವು.

* ವಿರೋಧ ಪಕ್ಷಗಳು 'ನಾರಿ ಶಕ್ತಿ'ಯನ್ನು ಲಘುವಾಗಿ ಪರಿಗಣಿಸುತ್ತಿವೆ. ನಾವು ರಾಷ್ಟ್ರದ ಜನರೊಂದಿಗಿದ್ದೇವೆ. ಆದರೆ, ಕೆಲವರು ರಾಜಕೀಯ ಪ್ರಯೋಜನಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ

* ನಾವು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ಮತ್ತಷ್ಟು ಅವಕಶ ಪಡೆದಿದ್ದೇವೆ. ಬಿಜೆಪಿ ಮತ್ತು ಎನ್ಡಿಎ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸಲಿವೆ.

* ಮಹಿಳಾ ಮೀಸಲಾತಿ ಬಗ್ಗೆ ದೇಶದ ವಿವಿಧೆಡೆಯಿಂದ ಮಹಿಳೆಯರು ನನಗೆ ಪತ್ರ ಬರೆದಿದ್ದರು. ಮಹಿಳಾ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸಿದ್ದೆನು.

* ಮಸೂದೆ ಅಂಗಿಕರಿಸಲು ಸಾಧ್ಯವಾಗದ್ದು ಸರ್ಕಾರದ ಸೋಲು. ಇದು ಕ್ರೆಡಿಟ್ ತೆಗೆದುಕೊಳ್ಳುವ ವಿಷಯವಾಗಿರಲಿಲದಲ. ಮಹಿಳೆಯರನ್ನು ಸಬಲೀಕರಣಗೊಳಿಸುವ ವಿಷಯವಾಗಿತ್ತು.

* ಭಾರತದ ಬೆಳವಣಿಗೆಯನ್ನು ಕಂಗ್ರೆಸ್ ತಡೆದಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಿಂದ ಹಲವು ದದೇಶಗಳು ಅಭಿವೃದ್ಧಿ ಸಾಧಿಸಿವೆ. ಭಾರತ ಮಾತ್ರ ಹಿಂದುಳಿದಿದೆ.

* ದೇಶಕ್ಕೊಂದೇ ಚುನಾವಣೆ, ಎಸ್ಐಆರ್, ವಕ್ಫ್ ಮಂಡಳಿ ಸುದಾರಣೆಗಳನ್ನು ಕಾಂಗ್ರೆಸ್ ವಿರೋಧಸಿದೆ. ಸಿಎಎಯನ್ನೂ ವಿರೋಧಿಸಿದ್ದ ಕಂಗ್ರೆಸ್ ಜನರಿಗೆ ಸುಳ್ಳು ಮಾಹಿತಿ ಹರಡಿತ್ತು.

ದೇಶವು ಇಂದು ಎದುರಿಸುತ್ತಿರುವ ಪ್ರತಿಯೊಂದು ಸವಾಲಿಗೆ ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಅನುಸರಿಸಿಕೊಂಡು ಬರುತ್ತಿರುವ ನಕಾರಾತ್ಮಕ ನಡೆಗಳೇ ಕಾರಣ
ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.