ನವದೆಹಲಿ: ಇರಾನ್ ಯುದ್ಧದ ವೇಳೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೇಲೆ ನಡೆದ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಆರು ದಿನಗಳ ವಿದೇಶ ಪ್ರವಾಸ ಇಂದಿನಿಂದ (ಮೇ 15, ಶುಕ್ರವಾರ) ಆರಂಭವಾಗಿದ್ದು, ಯುಎಇ, ನೆದರ್ಲೆಂಡ್ಸ್, ಸ್ವೀಡನ್, ನಾರ್ವೆ ಹಾಗೂ ಇಟಲಿಗೆ ಭೇಟಿ ನೀಡಲಿದ್ದಾರೆ.

ಶುಕ್ರವಾರ ಮಧ್ಯಾಹ್ನ ಅಬುಧಾಬಿಗೆ ತಲುಪಿದ ಮೋದಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಸ್ವಾಗತಿಸಿದರು.

ನಹ್ಯಾನ್ ಜೊತೆ ಮಾತುಕತೆ ನಡೆಸಿರುವ ಮೋದಿ, ‘ಯುಎಇ ಮೇಲಿನ ದಾಳಿಯನ್ನು ಒಪ್ಪಲಾಗದು. ಆದಾಗ್ಯೂ, ಸಂಘರ್ಷದ ಪರಿಸ್ಥಿತಿಯನ್ನು ಯುಎಇ ಸಂಯಮದಿಂದ ನಿಭಾಯಿಸಿದ ರೀತಿ ಶ್ಲಾಘನೀಯ’ ಎಂದು ಹೇಳಿದ್ದಾರೆ.

‘ಪಶ್ಚಿಮ ಏಷ್ಯಾ ಸಂಘರ್ಷದ ಪರಿಣಾಮ ಜಗತ್ತಿನಾದ್ಯಂತ ವ್ಯಾಪಕವಾಗುತ್ತಿದೆ. ಹೀಗಾಗಿ, ಶಾಂತಿ ಸ್ಥಾಪನೆಗೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಭಾರತ ಸಿದ್ಧವಿದೆ’ ಎಂದು ಭರವಸೆ ನೀಡಿದ್ದಾರೆ.

ಉಭಯ ನಾಯಕರ ಮಾತುಕತೆ ವೇಳೆ, ರಕ್ಷಣಾ ಸಹಕಾರ, ಪೆಟ್ರೋಲಿಯಂ ನಿಕ್ಷೇಪಗಳು ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ ಪೂರೈಕೆಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಏರ್ಪಟ್ಟಿದೆ ಎಂದು ಭಾರತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರ್ಬಿಎಲ್ ಬ್ಯಾಂಕ್, ಸಮ್ಮಾನ್ ಕ್ಯಾಪಿಟಲ್ ಮತ್ತು ಭಾರತೀಯ ಮೂಲಸೌಕರ್ಯ ಅಭಿವೃದ್ಧಿಗಾಗಿ ಯುಎಇ ಅಂದಾಜು 5 ಬಿಲಿಯನ್ ಡಾಲರ್ (ಸುಮಾರು ₹ 47.95 ಸಾವಿರ ಕೋಟಿ) ಹೂಡಿಕೆ ಮಾಡಲಿದೆ ಎಂಬ ಘೋಷಣೆಯೂ ಹೊರಬಿದ್ದಿದೆ.

ಯುಎಇ ಮೇಲಿನ ದಾಳಿ ವೇಳೆ ಮೂವರು ಭಾರತೀಯರು ಗಾಯಗೊಂಡಿದ್ದರು. ಇದೇ ತಿಂಗಳ ಆರಂಭದಲ್ಲಿ ಆ ಬಗ್ಗೆ ಮಾತನಾಡಿದ್ದ ಮೋದಿ, ಇರಾನ್ ಹೆಸರನ್ನು ಉಲ್ಲೇಖಿಸದೆ ದಾಳಿಯನ್ನು ಖಂಡಿಸಿದ್ದರು.
.ಇಂಧನ ಬಿಕ್ಕಟ್ಟಿನ ನಡುವೆ ಪ್ರಧಾನಿ ಮೋದಿ ಯುಎಇ, ಯುರೋಪ್ ಪ್ರವಾಸ ಆರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.