ಹಲ್ದಿಯಾ: ಚುನಾವಣೆ ಹೊಸ್ತಿಲಿನಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪರವಾಗಿ ಗುರುವಾರ ಆರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನುಗಾರಿಕೆ ಮತ್ತು ಸಾಗರ ಆಹಾರೋತ್ಪನ್ನ ವಲಯದಲ್ಲಿ ರಾಜ್ಯವನ್ನು ಸ್ವಾವಲಂಬಿಯಾಗಿಸುವುದಾಗಿಯೂ ಅವರು ಹೇಳಿದ್ದಾರೆ.

ಆರು ಗ್ಯಾರಂಟಿಗಳು:

ಟಿಎಂಸಿ ಆಡಳಿತದಲ್ಲಿರುವ ಭಯದ ವಾತಾವರಣವನ್ನು ತೊಡೆದುಹಾಕಿ ವಿಶ್ವಾಸ, ನಂಬಿಕೆ ಆಧರಿತ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದು

ಸಾರ್ವಜನಿಕ ಸೇವೆಯಲ್ಲಿರುವವರು ತೆಗೆದುಕೊಳ್ಳುವ ಎಲ್ಲಾ ಕ್ರಮಗಳು ಸಾರ್ವಜನಿಕರಿಗೆ ಉತ್ತರದಾಯಿ ಆಗಿರುವಂತೆ ಮಾಡುವುದು

ಟಿಎಂಸಿ ಮುಚ್ಚಿಹಾಕಿರುವ ಭ್ರಷ್ಟಾಚಾರದ ಎಲ್ಲಾ ಪ್ರಕರಣಗಳು, ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳನ್ನು ಬಿಜೆಪಿ ಮತ್ತೆ ತೆರೆದು ತನಿಖೆ ನಡೆಸಲಿದೆ

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಎಲ್ಲಾ ನಾಯಕರನ್ನೂ ಜೈಲಿಗೆ ಕಳುಹಿಸಲಾಗುವುದು, ಟಿಎಂಸಿಯ ಯಾವ ಗೂಂಡಾ ಕೂಡ ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು

ಎಲ್ಲಾ ಅರ್ಹ ನಾಗರಿಕರಿಗೆ ಸರ್ಕಾರದ ಸೌಲಭ್ಯ, ಯೋಜನೆ ತಲುಪುವಂತೆ ಮಾಡಲಾಗುವುದು. ನುಸುಳುಕೋರರಿಗೆ ದೇಶದಲ್ಲಿ ಇರಲು ಅವಕಾಶ ನೀಡಲಾಗದು

ರಾಜ್ಯದ ಸರ್ಕಾರಿ ಉದ್ಯೋಗಿಗಳಿಗೆ, ಶಿಕ್ಷಕರಿಗೆ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರಿಗಾಗಿ 7ನೇ ಹಣಕಾಸು ಆಯೋಗವನ್ನು ಬಿಜೆಪಿ ಸರ್ಕಾರ ರಚನೆಯಾದ ತಕ್ಷಣವೇ ಅನುಷ್ಠಾನಗೊಳಿಸಲಾಗುವುದು

.‘ನಿರ್ಮಮ್’ ಸರ್ಕಾರ ಕಿತ್ತೊಗೆಯಿರಿ: ಪಶ್ಚಿಮ ಬಂಗಾಳದ ಮತದಾರರಿಗೆ ಮೋದಿ ಕರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.