ನವದೆಹಲಿ: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಕೆಲ ವಿಷಯಗಳ ಕುರಿತು ಸಮರ್ಪಕ ಉತ್ತರ ನೀಡದೇ ನ್ಯಾಯಮಂಡಳಿಯ ಕಾರ್ಯನಿರ್ವಹಣೆಗೆ ‘ಭಾರಿ ಅಡಚಣೆ’ ಉಂಟು ಮಾಡುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಹೇಳಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಕಲ್ನಾರು (ಅಸ್ಬೆಸ್ಟಾಸ್) ಶೀಟುಗಳ ಬಳಕೆಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ವಿಚಾರವಾಗಿ ಸಚಿವಾಲಯ ಉತ್ತರ ನೀಡಿಲ್ಲ. ಹೀಗಾಗಿ, ನ್ಯಾಯಮಂಡಳಿ ಈ ಮಾತು ಹೇಳಿದೆ.

ಮಂಡಳಿಯ ಪ್ರಧಾನ ಪೀಠವು ಈ ಕುರಿತ ಅರ್ಜಿ ವಿಚಾರಣೆ ನಡೆಸಿತು.

ಕಲ್ನಾರು ಬಳಕೆಯಿಂದ ಕೈಗಾರಿಕೆಗಳಲ್ಲಿನ ಕಾರ್ಮಿಕರ ಆರೋಗ್ಯದ ಮೇಲಾಗುವ ಪರಿಣಾಮ ಹಾಗೂ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಬೇರೆಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ, ಪರಿಣಾಮಗಳು ಭಿನ್ನವಾಗಿದ್ದಲ್ಲಿ, ಈ ಕುರಿತು ಸಚಿವಾಲಯ ವೈಜ್ಞಾನಿಕ ಅಧ್ಯಯನ ಕೈಗೊಂಡು, ವರದಿ ಸಲ್ಲಿಸಬೇಕು ಎಂದು ನ್ಯಾಯಮಂಡಳಿ ಜುಲೈನಲ್ಲಿ ಸಚಿವಾಲಯಕ್ಕೆ ಸೂಚಿಸಿತ್ತು.

‘ಈ ವಿಚಾರವಾಗಿ ಸಚಿವಾಲಯ ಸೆಪ್ಟೆಂಬರ್ 24ರಂದು ನೀಡಿರುವ ಪ್ರತಿಕ್ರಿಯೆಯಲ್ಲಿ, ವೈಜ್ಞಾನಿಕ ಅಧ್ಯಯನಕ್ಕೆ ಸಂಬಂಧಿಸಿ ತಾನು ಕೇಳಿದ ಪ್ರಶ್ನಗಳಿಗೆ ನಿರ್ದಿಷ್ಟ ಉತ್ತರ ಇಲ್ಲ’ ಎಂದು ನ್ಯಾಯಮೂರ್ತಿ ಸುಧೀರ್ ಅಗರವಾಲ್ ಹಾಗೂ ತಜ್ಞ ಸದಸ್ಯ ಅಫ್ರೋಜ್ ಅಹ್ಮದ್ ಅವರು ಇದ್ದ ನ್ಯಾಯಮಂಡಳಿಯ ಪೀಠವು ನವೆಂಬರ್ 26ರಂದು ಹೊರಡಿಸಿದ್ದ ಆದೇಶದಲ್ಲಿ ತಿಳಿಸಿತ್ತು.

ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ ಸಮಿತಿ ರಚಿಸಿ ಎರಡು ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ, ಪೀಠವು ಸೆ.25ರಂದು ನೀಡಿದ್ದ ಆದೇಶದಲ್ಲಿ ತಿಳಿಸಿತ್ತು.

‘ಸಚಿವಾಲಯ 12 ಸದಸ್ಯರಿದ್ದ ಸಮಿತಿ ರಚಿಸಿದ್ದರೂ, ಅಧ್ಯಯನ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ವಿಫಲವಾಗಿದೆ’ ಎಂದು ಪೀಠ ಹೇಳಿದೆ.

‘ಸಚಿವಾಲಯದಿಂದ ಸಮರ್ಪಕ ಉತ್ತರ ಸಿಗದೇ ಇರುವ ಕಾರಣ, ಈ ವಿಷಯವಾಗಿ ವಿಚಾರಣೆ ಮುಂದುವರಿಸುವ ಸ್ಥಿತಿಯಲ್ಲಿ ನ್ಯಾಯಮಂಡಳಿ ಇಲ್ಲ’ ಎಂದು ಎನ್ಜಿಟಿ ಹೇಳಿದೆ.

‘ಈ ವಿಷಯ ಕುರಿತು ಸಮಗ್ರ ಮಾಹಿತಿ ಹೊಂದಿರುವ, ಜಂಟಿ ಕಾರ್ಯದರ್ಶಿಗಿಂತ ಕಡಿಮೆ ಇಲ್ಲದ ಶ್ರೇಣಿಯ ಸಚಿವಾಲಯದ ಅಧಿಕಾರಿ ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಹಾಜರಿದ್ದು, ವಿವರಣೆ ನೀಡಬೇಕು’ ಎಂದು ಸೂಚಿಸಿದ ಎನ್ಜಿಟಿ, ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.