ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75 ದಿನಗಳಲ್ಲಿ 75 ಬೀಚ್‌ ಸ್ವಚ್ಛ

ರಾಜ್ಯದ ನಾಲ್ಕು ಬೀಚ್‌ ಸೇರ್ಪಡೆ
Last Updated 11 ಜುಲೈ 2022, 16:05 IST
ಅಕ್ಷರ ಗಾತ್ರ

ನವದೆಹಲಿ:ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕದ ಮಂಗಳೂರಿನ ಪಣಂಬೂರು, ಮಲ್ಪೆ, ಭಟ್ಕಳದ ಗೊರಟೆ ಮತ್ತು ಕುಮಟಾದ ಅಘನಾಶಿನಿ ಸೇರಿ ದೇಶದಾದ್ಯಂತ 75 ಬೀಚ್‌ಗಳನ್ನು 75 ದಿನಗಳಲ್ಲಿ ಸ್ವಚ್ಛಗೊಳಿಸಲು ಕೇಂದ್ರ ಯೋಜಿಸಿದೆ.

ದೇಶದ 7,500 ಕಿ.ಮೀ ಉದ್ದ ಪ್ರತಿ ಕಿಲೋ ಮೀಟರ್‌ಗೆ 75 ಸ್ವಯಂ ಸೇವಕರ ಬೆಂಬಲದೊಂದಿಗೆ ಕರಾವಳಿ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಗುತ್ತದೆ.

ಜುಲೈ 3 ರಂದು ಆರಂಭಿಸಿರುವ ಅಭಿಯಾನ ಸೆ. 17 ರಂದು ಅಂತರರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನ ಆಚರಿಸುವುದರೊಂದಿಗೆ ದೇಶದ ಅತಿ ದೊಡ್ಡ ಬೀಚ್ ಸ್ವಚ್ಛತಾ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತದೆ.

ಸಮುದ್ರ ತೀರದಿಂದ 1,500 ಟನ್ ತ್ಯಾಜ್ಯ ತೆಗೆಯುವ ಗುರಿ ಹೊಂದಲಾಗಿದ್ದು, ಇದು ಸಮುದ್ರ ಜೀವಿಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ನೆಲೆಸಿರುವ ಜನರಿಗೆ ಸಮಾಧಾನ ತರಲಿದೆ. ಪ್ರತಿ ತ್ರೈಮಾಸಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ಭೂ ವಿಜ್ಞಾನ ಸಚಿವಾಲಯ ಕಾರ್ಯದರ್ಶಿ ಎಂ. ರವಿಚಂದ್ರನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT