ನಾಗ್ಪುರ: ಜಗತ್ತಿನಲ್ಲಿ ಘರ್ಷಣೆ ಮತ್ತು ಬಿಕ್ಕಟ್ಟುಗಳಿಗೆ ಸ್ವಾರ್ಥ ಹಿತಾಸಕ್ತಿಗಳು, ಪ್ರಾಬಲ್ಯದ ಬಯಕೆಯೇ ಮೂಲ ಕಾರಣ ಎಂದು ಆರ್ಎಸ್ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ಏಕತೆ, ಶಿಸ್ತು ಮತ್ತು ಧರ್ಮದ ಅನುಸರಣೆಯಿಂದ ಶಾಂತಿ ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ನಾಗ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ವಿದರ್ಭ ಪ್ರಾಂತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಸಭೆಯಲ್ಲಿ ಮಾತನಾಡಿದರು.

ಸುಮಾರು 2,000 ವರ್ಷಗಳಿಂದಲೂ ಜಗತ್ತು ಸಂಘರ್ಷಗಳನ್ನು ತಡೆಯಲು, ಪರಿಹರಿಸಲು ವಿವಿಧ ವಿಚಾರಗಳನ್ನು ಪ್ರಯೋಗಿಸಿದೆ. ಆದರೆ ಯಶಸ್ಸು ಕಂಡಿರುವುದು ಅಲ್ಪ ಮಾತ್ರ ಎಂದು ಅವರು ಬೇಸರ ವ್ಯಕ್ತಪಡಿಸಿದರು.
.‘ಧುರಂಧರ್’ನಿಂದ ನಾನು ತುಂಬಾ ದೂರ ಇದ್ದೇನೆ: ಬಹುಭಾಷಾ ನಟ ಪ್ರಕಾಶ್ ರಾಜ್.ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ಶೇಕ್ ಇಟ್ ಪುಷ್ಪವತಿ’ ನಿಮಿಕಾ ರತ್ನಾಕರ್ .
ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರ, ಶ್ರೇಷ್ಠತೆ ಮತ್ತು ಕೀಳರಿಮೆಯ ವಿಚಾರಗಳು ಇನ್ನೂ ಅಸ್ತಿತ್ವದಲ್ಲಿವೆ ಎಂದ ಅವರು, ಸಂಘರ್ಷ ಬಿಟ್ಟು ಸಾಮರಸ್ಯ ಮತ್ತು ಸಹಕಾರದಿಂದ ಮುನ್ನಡೆಯುವಂತೆ ಕರೆ ನೀಡಿದರು.

‘ಭಾರತವು ಮಾನವೀಯತೆಯನ್ನು ನಂಬುತ್ತದೆ. ಆದರೆ ಇತರರು ಶ್ರೇಷ್ಠತೆಯ ಅಸ್ತಿತ್ವ ಮತ್ತು ಉಳಿವಿಗಾಗಿ ಹೋರಾಟದಲ್ಲಿ ತೊಡಗಿದ್ದಾರೆ. ಜಗತ್ತಿಗೆ ಬೇಕಿರುವುದು ಸಾಮರಸ್ಯವೇ ಹೊರತು ಸಂಘರ್ಷವಲ್ಲ’ ಎಂದು ಅವರು ಪುನರುಚ್ಚರಿಸಿದರು.

ಬಿಕ್ಕಟ್ಟು, ಸಂಘರ್ಷಗಳ ಮೂಲಕ ಎಡವಿ ಬೀಳುತ್ತಿರುವ ಜಗತ್ತಿನಲ್ಲಿ ಸಮತೋಲನ ಸ್ಥಾಪಿಸುವುದು ಭಾರತದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
.ಖತೀಬ್, ಲಾರಿಜಾನಿ ಹತ್ಯೆ: ಇರಾನ್ನ ಈ 4 ಪ್ರಭಾವಿ ನಾಯಕರೇ ಅಮೆರಿಕದ ಮುಂದಿನ ಗುರಿ.ಟೆಕ್ ಥೆರಪಿ: ನಮ್ಮನ್ನೇ ‘ಉತ್ಪನ್ನ’ವಾಗಿಸುವ ಟೆಕ್ ದೈತ್ಯರ ಅಸಲಿಯತ್ತು ಗೊತ್ತೇ?.ವಿಶ್ವ ಬಾಯಿ ಆರೋಗ್ಯ ದಿನ: ನಿಮ್ಮ ದಂತವನ್ನು ಕಾಪಾಡಿಕೊಳ್ಳಲು ಸಲಹೆಗಳು ಇಲ್ಲಿವೆ.ಮಹಾಯುದ್ಧದ ಸ್ಮಾರಕದೆದುರು ನೃತ್ಯ ಮಾಡಿದ ಭಾರತ ಮೂಲದ ಟೆಕ್ಕಿಯ ಗಡೀಪಾರಿಗೆ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.