ಭಾರತ ವಿಶ್ವಗುರು ಅಲ್ಲ: ಮುರಳಿ ಮನೋಹರ ಜೋಶಿ
‘ಭಾರತವು ವಿಶ್ವಗುರು ಆಗಿ ಉಳಿದಿಲ್ಲ. ನಾವು ಆ ಪದ ಬಳಕೆಯಿಂದ ದೂರ ಇರಬೇಕು’ ಎಂದು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ ಜೋಶಿ ಸೋಮವಾರ ಹೇಳಿದರು. ‘ಒಂದು ಕಾಲದಲ್ಲಿ ಭಾರತ ವಿಶ್ವಗುರುವಾಗಿತ್ತು. ಇಂದು ಅದು ವಿಶ್ವಗುರುವಾಗಿ ಉಳಿದಿಲ್ಲ’ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸಂಸ್ಕೃತವನ್ನು ಭಾರತದ ಅಧಿಕೃತ ಭಾಷೆಯಾಗಿ ಘೋಷಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವಾರು ಜನರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರು’ ಎಂದರು.