ಸೆರೈಕೆಲಾ: ಜಾರ್ಖಂಡ್ನ ಸೆರೈಕೆಲಾ–ಖಾರ್ಸವನ್ನಲ್ಲಿ ಚಲಿಸುತ್ತಿರುವ ರೈಲಿನಿಂದ ಮಗುವನ್ನು ಎಸೆದು ಕೊಲೆ ಮಾಡಿದ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಜಾರ್ಖಂಡ್: ನಕ್ಸಲರೊಂದಿಗೆ ಗುಂಡಿನ ಚಕಮಕಿ.
ಖರ್ಸಾವನ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಖರ್ಸಾವನ್ ಮತ್ತು ಮಹಾಲಿಮರುಪ್ ನಿಲ್ದಾಣಗಳ ನಡುವೆ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲು ಚಲಿಸುತ್ತಿರುವಾಗಲೇ ಒಂದೂವರೆ ತಿಂಗಳ ಮಗುವನ್ನು ಎಸೆಯಲಾಗಿದೆ.

ಮಗುವಿನ ಮೃತದೇಹ ರೈಲು ಹಳಿಗಳ ಸಮೀಪ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಹೌರಾ–ಬಾರ್ಬಿಲ್ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಇದು ನಡೆದಿದೆ. ಮೂರನೇ ವರ್ಷದ ಮತ್ತೊಂದು ಮಗುವನ್ನು ಎಸೆಯಲು ಪ್ರಯತ್ನಿಸಿದಾಗ ಸಹಪ್ರಯಾಣಿಕರು ಆಕೆಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಖರ್ಸಾವನ್ ಪೊಲೀಸ್ ಠಾಣೆಯ ಅಧಿಕಾರಿ ಗೌರವ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
.ಜಾರ್ಖಂಡ್: ₹5 ಲಕ್ಷ ಇನಾಮು ಘೋಷಣೆಯಾಗಿದ್ದ ಇಬ್ಬರು ನಕ್ಸಲರ ಶರಣಾಗತಿ.
ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯ ಮಜ್ಗಾಂವ್ ಮುದ್ರಾವತಿ ಗೋಪಿ ಆರೋಪಿ. ಸಹಪ್ರಯಾಣಿಕರು ಅವರನ್ನು ರೈಲ್ವೆ ರಕ್ಷಣಾ ದಳಕ್ಕೆ ಒಪ್ಪಿಸಿದ್ದಾರೆ.

ಆರೋಪಿ ಮಹಿಳೆಯು 4 ವರ್ಷದ ಹಿಂದೆ ಪಶ್ಚಿಮ ಬಂಗಾಳದ ಮೊಹಮ್ಮದ್ ಸಹಾಬುದ್ದೀನ್ ಎಂಬುವವರೊಂದಿಗೆ ಪರಾರಿಯಾಗಿದ್ದರು. ಸಹಜೀವನ ನಡೆಸುತ್ತಿದ್ದ ಅವರು ಬಳಿಕ ವಿವಾಹವಾಗಿದ್ದರು. ತನ್ನ ತವರಿಗೆ ಹಿಂದಿರುಗಬೇಕು ಎಂದು ಪತಿ ಒತ್ತಾಯ ಮಾಡುತ್ತಿದ್ದರಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
.ದೆಹಲಿ ಪೊಲೀಸರು, ಜಾರ್ಖಂಡ್ ATS ಜಂಟಿ ಕಾರ್ಯಾಚರಣೆ: ಇಬ್ಬರು ಐಸಿಸ್ ಉಗ್ರರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.