ದೇವಾಸ್: ಮಧ್ಯಪ್ರದೇಶದ ದೇವಾಸ್ ನಗರದ ಪ್ರಸಿದ್ಧ ಮಾತಾ ತೇಕ್ರಿ ದೇವಾಲಯಕ್ಕೆ ಜನರ ಗುಂಪೊಂದು ಬಲವಂತವಾಗಿ ಪ್ರವೇಶಿಸಿದ್ದು, ಅವರನ್ನು ತಡೆದ ಅರ್ಚಕರನ್ನು ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಶಾಸಕರ ಪುತ್ರ ಗುಂಪಿನಲ್ಲಿದ್ದ ಎಂದು ವಿರೋಧ ಪಕ್ಷ ಕಾಂಗ್ರೆಸ್ ಹೇಳಿಕೊಂಡರೂ, ಪೊಲೀಸರು ಆರೋಪವನ್ನು ದೃಢಪಡಿಸಲಿಲ್ಲ.
.ಮಹಜರು ನಡೆಸಿ ಬರುವಾಗ ಪೊಲೀಸರ ಮೇಲೆ ಹಲ್ಲೆ: ಕೊಲೆ ಆರೋಪಿ ಕಾಲಿಗೆ ಗುಂಡು.
ಜಿತು ರಘುವಂಶಿ ಎಂಬಾಂತ ಶುಕ್ರವಾರ ತಡರಾತ್ರಿ ಗುಂಪು ಕಟ್ಟಿಕೊಂಡು 8–10 ಕಾರುಗಳಲ್ಲಿ ದೇವಾಲಯಕ್ಕೆ ಬಂದಿದ್ದಾರೆ ಎಂದು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅರ್ಚಕರು ದೂರು ನೀಡಿದ್ದಾರೆ. ಆತನಿಗೆ ಅಪರಾಧ ಹಿನ್ನೆಲೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಪಿನ ಸದಸ್ಯರು ಗೇಟ್ ತೆರೆಯಲು ಅರ್ಚಕರಿಗೆ ಹೇಳಿದ್ದಾರೆ. ನಿರಾಕರಿಸಿದಾಗ, ಅವರನ್ನು ನಿಂದಿಸಿ ಥಳಿಸಿದ್ದಾರೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್ವಾಲ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
.ಹಲ್ಲೆ ಮಾಡಿ ಚಿನ್ನಾಭರಣ ಕಸಿದಿದ್ದ ಅಪರಾಧಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ.
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಸುಮಾರು 50 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರೊಬ್ಬರ ಪುತ್ರ ಈ ಗುಂಪನ್ನು ಮುನ್ನಡೆಸಿದ್ದಾರೆಯೇ ಎನ್ನುವ ಪ್ರಶ್ನೆಗೆ, ‘ಪ್ರಕರಣ ತನಿಖೆ ಹಂತದಲ್ಲಿದೆ’ ಎಂದು ಅಗರ್ವಾಲ್ ವರದಿಗಾರರಿಗೆ ತಿಳಿಸಿದ್ದಾರೆ.

ಬೆಟ್ಟದ ತುದಿಯಲ್ಲಿರುವ ದೇವಾಲಯಕ್ಕೆ ಬಂದು ಎರಡು ಕಾರಿನ ಮೇಲೆ ಕೆಂಪು ದೀಪ ಇರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.

ಸನಾತನಿಯಾಗಿದ್ದರೂ ಇಂತಹ ಕೃತ್ಯ ಎಸಗಿದ ತನ್ನ ಮಗನ ಮೇಲೆ ಬಿಜೆಪಿ ಶಾಸಕರು ನಿಗಾ ಇಡಬೇಕು ಎಂದು ದೇವಾಸ್ ನಗರ ಕಾಂಗ್ರೆಸ್ ಅಧ್ಯಕ್ಷ ಮನೋಜ್ ರಜನಿ ಹೇಳಿದ್ದಾರೆ.
.ಚಿಕ್ಕಮಗಳೂರು | ವ್ಯಸನ ಮುಕ್ತಿ ಕೇಂದ್ರದಲ್ಲಿ ಹಲ್ಲೆ: ಕ್ರಮಕ್ಕೆ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.