ಮುಳಬಾಗಿಲು: ರಸಗೊಬ್ಬರ ಹಾಗೂ ಕೀಟನಾಶಕಗಳ ವ್ಯಾಪಾರಿಗಳು ವಿವಿಧ ಬೇಡಿಕೆ ಈಡೇರಿಕೆಗಾಗಿ ಏ.27 ರಂದು ಭಾರತದಾದ್ಯಂತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಾಮಗ್ರಿಗಳ ಮಾರಾಟಗಾರರ ಪದಾಧಿಕಾರಿ ನಂಗಲಿ ಸಿರೀಶ್ ತಿಳಿಸಿದರು.

ಸುದ್ದಿಗಾರಿರೊಂದಿಗೆ ಮಾತನಾಡಿದ ಅವರು, ಯೂರಿಯಾ ಮತ್ತು ಇತರ ರಸಗೊಬ್ಬರಗಳ ಮಾರಾಟದ ಮೇಲೆ ಸರ್ಕಾರಗಳು ಅನಗತ್ಯವಾಗಿ ಹೇರಲಾಗುತ್ತಿರುವ ಲಿಂಕ್ ಸಿಸ್ಟಮ್ ವಿರೋಧಿಸಿ ಹಾಗೂ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಎಫ್ಐಡಿ ನಿಯಮದಿಂದ ರೈತರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಭಾರತ್ ಬಂದ್ (ರಾಸಾಯನಿಕ ಹಾಗೂ ಔಷಧ ಅಂಗಡಿಗಳ) ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅನಗತ್ಯ ವಿಧಾನಗಳಿಂದ ರಸಗೊಬ್ಬರಗಳ ಸಾರಿಗೆ ವೆಚ್ಚದ ಹೊರೆಯನ್ನು ವ್ಯಾಪಾರಿಗಳ ಮೇಲೆ ಹಾಕುತ್ತಿರುವುದನ್ನು ಖಂಡಿಸಿ ಹಮ್ಮಿಕೊಂಡಿರುವ ಮುಷ್ಕರಕ್ಕೆ ಕೃಷಿ ಪರಿಕರಗಳ ಮಾರಾಟಗಾರರ ವ್ಯಾಪಾರಸ್ಥರು ತಮ್ಮ ಅಂಗಡಿ ಮುಚ್ಚುವ ಮೂಲಕ ಬಂದ್ಗೆ ಸಹಕರಿಸಿ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-18-1258001383

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.