ನವದೆಹಲಿ: ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರೈಲು ಸೆಟ್ಗಳನ್ನು ಬಳಸಿಕೊಂಡು ಕಾರ್ಯಾಚರಣೆಯನ್ನು ಆರಂಭಿಸುತ್ತದೆ ಎಂದು ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿ ಮಂಗಳವಾರ ಸಂಸತ್ತಿನಲ್ಲಿ ವರದಿಯನ್ನು ಮಂಡಿಸಿದೆ.

ಮಹತ್ವಾಕಾಂಕ್ಷೆಯ 508 ಕಿ.ಮೀ ಉದ್ದದ ಬುಲೆಟ್ ರೈಲು ಕಾರಿಡಾರ್ ಭಾರತ ನಿರ್ಮಿತ ಬುಲೆಟ್ ರೈಲು ಸೆಟ್ (ಬಿ28)ನೊಂದಿಗೆ ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ವರದಿ ಹೇಳಿದೆ.

ಇದು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಂತಹ ಉಪಕ್ರಮಗಳ ಮೂಲಕ ಸ್ವಾವಲಂಬನೆಗಾಗಿ ಭಾರತ ಸರ್ಕಾರದ ಪರಿಕಲ್ಪನೆಗೆ ಹೊಂದಿಕೆಯಾಗುತ್ತದೆ. ಇದು ದೇಶೀಯವಾಗಿ ರೋಲಿಂಗ್ ಸ್ಟಾಕ್ ಉತ್ಪಾದನೆಯನ್ನು ಸಕ್ರಿಯಗೊಳಿಸುತ್ತದೆ. ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ವರದಿ ತಿಳಿಸಿದೆ.

ಸೂರತ್ ಮತ್ತು ವಾಪಿ ನಡುವೆ ಸುಮಾರು 97 ಕಿ.ಮೀ ಉದ್ದದ ಆರಂಭಿಕ ಕಾರ್ಯಾಚರಣೆಯು 2027ರ ಆಗಸ್ಟ್ ವೇಳೆಗೆ ಭಾರತ-ನಿರ್ಮಿತ ಹೈ ಸ್ಪೀಡ್ ರೈಲುಗಳನ್ನು ಬಳಸಿಕೊಂಡು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. ರೈಲು ಸೆಟ್ಗಳನ್ನು ಗಂಟೆಗೆ 280 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಬಿಇಎಂಎಲ್ ಕೋಚ್ ರೈಲು ಸೆಟ್ಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.