ಮುಂಬೈ: ಕ್ರಿಕೆಟ್ ಪ್ಯಾಡ್ಗಳು ಮತ್ತು ಕೈಗವಸುಗಳ ಒಳಗೆ ಬಚ್ಚಿಟ್ಟು, ವೇರ್ಹೌಸ್ ಮತ್ತು ಲಾಜಿಸ್ಟಿಕ್ ಹಬ್ಗಳನ್ನು ಬಳಸಿಕೊಂಡು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಮಾದಕವಸ್ತು ಕಳ್ಳಸಾಗಾಣಿಕೆ– ವಿತರಣೆ ಜಾಲವನ್ನು ಭೇದಿಸಿರುವ ಮಾದಕವಸ್ತು ನಿಯಂತ್ರಣ ಬ್ಯೂರೊ(ಎನ್ಸಿಬಿ) ಅಧಿಕಾರಿಗಳು, ಶುಕ್ರವಾರ ಸುಮಾರು ₹1,745 ಕೋಟಿ ಮೊತ್ತದ 349 ಕೆ.ಜಿಯಷ್ಟು ಕೊಕೇನ್ ಅನ್ನು ಮುಂಬೈನಲ್ಲಿ ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಎನ್ಸಿಬಿ ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ. ಭಾರತದಲ್ಲಿ ವಾರ್ಷಿಕ ಸರಾಸರಿ 200ರಿಂದ 300 ಕೆ.ಜಿಯಷ್ಟು ಕೊಕೇನ್ ವಶಪಡಿಸಿಕೊಳ್ಳಲಾಗುತ್ತದೆ. ಆದರೆ, ಈಗ ಎನ್ಸಿಬಿ ಬಲೆಗೆ ಬಿದ್ದಿರುವ ಕೊಕೇನ್ ಪ್ರಮಾಣ ಇದನ್ನು ಮೀರಿಸಿದೆ.

‘ಆಪರೇಷನ್ ವೈಟ್ ಸ್ಟ್ರೈಕ್’ ಹೆಸರಿನಲ್ಲಿ ಎನ್ಸಿಬಿ ನಡೆಸಿದ ಈ ಕಾರ್ಯಾಚರಣೆಗೆ ಆರು ತಿಂಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನವಿ ಮುಂಬೈ, ಥಾಣೆ, ಕಲಾಂಬೋಲಿ –ಭಿವಂಡಿ ವ್ಯಾಪ್ತಿಯಲ್ಲಿ ಕೆಲವು ವೇರ್ಹೌಸ್ ಮತ್ತು ಲಾಜಿಸ್ಟಿಕ್ ಹಬ್ಗಳನ್ನು ಕಳ್ಳಸಾಗಾಣಿಕೆಗೆ ಸುರಕ್ಷಿತ ಮಾರ್ಗವನ್ನಾಗಿ ಬಳಸಿಕೊಳ್ಳಲಾಗಿತ್ತು.

ವಿದೇಶಗಳಿಂದ ಆಮದು ಮಾಡಿಕೊಳ್ಳುವ ಯಂತ್ರೋಪಕರಣಗಳ ಒಳಗೆ ಮಾದಕ ವಸ್ತುಗಳನ್ನು ಒಂಬತ್ತು ಪದರಗಳ ಪಾಲಿಥಿನ್ ಚೀಲದಲ್ಲಿ ಸುತ್ತಿ, ಈ ಚೀಲಕ್ಕೆ ಕಪ್ಪು ಜಿಡ್ಡಿನ ಪದಾರ್ಥದ ಲೇಪಿಸಿ, ಪರಿಶೀಲನೆ ವೇಳೆ ಪತ್ತೆಯಾಗದಂತೆ ಭಾರತಕ್ಕೆ ತರಲಾಗುತ್ತಿತ್ತು. ಲಾಜಿಸ್ಟಿಕ್ ಹಬ್ ಮತ್ತು ವೇರ್ ಹೌಸ್ನಿಂದ ಇದು ಕ್ರಿಕೆಟ್ ಪ್ಯಾಡ್, ಕೈಗವಸುಗಳಲ್ಲಿ ಬಚ್ಚಿಟ್ಟು ದೇಶದ ವಿವಿಧೆಡೆ ಪೂರೈಕೆ ಆಗುತ್ತಿತ್ತು.

ಈ ಅಂತರರಾಷ್ಟ್ರಿಯ ಜಾಲದ ಪ್ರಮುಖ ಸೂತ್ರಧಾರ, ನಿರ್ವಾಹಕರು, ಹಣಕಾಸುದಾರರು, ಬಳಕೆಗಾರರನ್ನು ಗುರಿಯಾಗಿಸಿ ಎನ್ಸಿಬಿ ತನಿಖೆ ಚುರುಕುಗೊಳಿಸಿದೆ. ಕುಖ್ಯಾತ ಮಾದಕವಸ್ತು ಕಳ್ಳ ಸಾಗಣೆದಾರ, ದಾವೂದ್ ಇಬ್ರಾಹಿಂನ ಸಹಚರ ಸಲೀಂ ಡೋಲಾನನ್ನು ದೇಶದಿಂದ ಗಡಿಪಾರು ಮಾಡಲಾದ ಕೆಲವು ದಿನಗಳ ಅಂತರದಲ್ಲೇ ಎನ್ಸಿಬಿ ಈ ದಾಳಿ ನಡೆಸಿದೆ.

‘ಅದ್ಭುತ ಕಾರ್ಯಾಚರಣೆ’: ಕಲಾಂ ಬೋಲಿ ಪ್ರದೇಶದ ವೇರ್ಹೌಸ್ ಮುಂದೆ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿಯ ಕಾರೊಂದನ್ನು ಪರಿಶೀಲಿಸಿದಾಗ ಅದರಲ್ಲಿ ತಲಾ 1 ಕೆ.ಜಿ ತೂಕದ, 136 ಪ್ಯಾಕೆಟ್ನಷ್ಟು ಕೊಕೇನ್ ಕ್ರಿಕೆಟ್ ಪ್ಯಾಡ್ ಮತ್ತು ಕೈಗವಸುಗಳಲ್ಲಿ ಪತ್ತೆಯಾಗಿದೆ. ಈ ದಾಳಿಯ ಬೆನ್ನಲ್ಲೇ ಭಿವಂಡಿ ಬಳಿಯ ವೇರ್ಹೌಸ್ನಲ್ಲಿ ನಡೆಸಿದ ಇನ್ನೊಂದು ದಾಳಿಯಲ್ಲಿ 213 ಕೆ.ಜಿಯಷ್ಟು ಕೊಕೇನ್ ಪತ್ತೆಯಾಗಿದೆ. ’ಅದ್ಭುತ ಕಾರ್ಯಾಚರಣೆ ನಡೆಸಿದ ಎನ್ಸಿಬಿಗೆ ಅಭಿನಂದನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.