ಮುಂಬೈ: ಕಿರಿಯ ಶ್ರೇಣಿಯ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿ, ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ಮಹಾರಾಷ್ಟ್ರದ ನಾಸಿಕ್ ನಗರದ ಬಹುರಾಷ್ಟ್ರೀಯ ಐಟಿ ಕಂಪನಿಯೊಂದರ ಆರು ಉದ್ಯೋಗಿ ಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಐಟಿ ಕಂಪನಿಯಲ್ಲಿ ಮಹಿಳಾ ಉದ್ಯೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮತಾಂತರಕ್ಕೆ ಯತ್ನ ನಡೆದಿರುವುದು ಅತ್ಯಂತ ಗಂಭೀರ ಪ್ರಕರಣ’ ಎಂದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಪ್ರಕರಣದ ಸಮಗ್ರ ತನಿಖೆಗೆ ಆದೇಶಿಸಿ ದ್ದಾರೆ. 2022ರಿಂದ 2026ರ ಅವಧಿಯಲ್ಲಿ ಪ್ರಕರಣ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಒಟ್ಟು 9 ಎಫ್ಐಆರ್ಗಳು ದಾಖಲಾಗಿವೆ. ಸಂತ್ರಸ್ತರಲ್ಲಿ 8 ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಡಾನಿಶ್ ಶೇಕ್, ತೌಸಿಫ್ ಅತ್ತರ್, ರಾಜಾ ಮೆಮನ್, ಶಾರೂಕ್ ಖುರೇಷಿ, ಶಫಿ ಶೇಕ್, ಆಸಿಫ್ ಮತ್ತು ಅನ್ಸಾರಿ ಬಂಧಿತ ಆರೋಪಿಗಳು.

ತನಿಖೆಗಾಗಿ ನಾಸಿಕ್ ನಗರ ಪೊಲೀಸ್ ಆಯುಕ್ತ ಸಂದೀಪ್ ಕಾರ್ಣಿಕ್ ಅವರು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ದ್ದಾರೆ. ‘ಇದು ಜಿಹಾದ್ ಅಲ್ಲ, ಪ್ರಕರಣದ ಸೂತ್ರಧಾರ, ಹಣಕಾಸಿನ ನೆರವು ನೀಡಿದ್ದು ಯಾರು ಎನ್ನವುದು ಪೊಲೀಸ್ ತನಿಖೆಯಿಂದ ಬಹಿರಂಗಗೊಳ್ಳಲಿದೆ’ ಎಂದು ಸಚಿವ ನಿತೀಶ್ ರಾಣೆ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-51-1177765585

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.