ಅಲಿಪುರ್ದೌರ್: ಪಶ್ಚಿಮ ಬಂಗಾಳದಲ್ಲಿ ಅಸ್ತಿತ್ವದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯವನ್ನು ಗಲಭೆ, ಭ್ರಷ್ಟಾಚಾರ ಮತ್ತು ಅರಾಜಕತೆಯು ತೀವ್ರವಾಗಿ ಬಾಧಿಸುತ್ತಿದೆ ಎಂದು ಗುಡುಗಿದ್ದಾರೆ.

ಅಲಿಪುರ್ದೌರ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಮೋದಿ, ಮುರ್ಷಿದಾಬಾದ್ ಮತ್ತು ಮಾಲ್ದಾದಲ್ಲಿ ಇತ್ತೀಚೆಗೆ ನಡೆದ ಗಲಭೆಗಳು ಟಿಎಂಸಿ ಆಡಳಿತದ ನಿಷ್ಕರುಣೆ ಮತ್ತು ಉದಾಸೀನತೆಗೆ ಸಾಕ್ಷಿ ಎಂದು ಪ್ರತಿಪಾದಿಸಿದ್ದಾರೆ.

'ಪಶ್ಚಿಮ ಬಂಗಾಳವು ಇಂದು ಸರಣಿ ಬಿಕ್ಕಟ್ಟುಗಳನ್ನು ಎದರಿಸುತ್ತಿದೆ. ಜನರಿಗೆ 'ಕ್ರೂರ ಸರ್ಕಾರ' ಬೇಡವಾಗಿದೆ. ಅವರು ಬದಲಾವಣೆ ಬಯಸಿದ್ದು, ಉತ್ತಮ ಆಡಳಿತವನ್ನು ಎದುರು ನೋಡುತ್ತಿದ್ದಾರೆ. ಆ ಕಾರಣಕ್ಕಾಗಿಯೇ, ಕ್ರೌರ್ಯ ಮತ್ತು ಭ್ರಷ್ಟಾಚಾರ ಬೇಕಾಗಿಲ್ಲ ಎಂದು ಇಡೀ ಬಂಗಾಳ ಹೇಳುತ್ತಿದೆ' ಎಂದು ಹೇಳಿದ್ದಾರೆ.
.‘ಆಪರೇಷನ್ ಸಿಂಧೂರ’ ಯಶಸ್ಸು: ಬಿಜೆಪಿ–ಕಾಂಗ್ರೆಸ್ ಮಧ್ಯೆ ರ್ಯಾಲಿ ಪೈಪೋಟಿ.ಬಿಆರ್ಎಸ್ ಅನ್ನು ಬಿಜೆಪಿ ಜೊತೆ ವಿಲೀನಗೊಳಿಸುವ ಯತ್ನ ನಡೆಯುತ್ತಿದೆ: ಕವಿತಾ.
'ಮೊದಲನೆಯದಾಗಿ, ಹಿಂಸಾಚಾರ ಮತ್ತು ಅವ್ಯವಸ್ಥೆಯು ಸಮಾಜದ ಚೌಕಟ್ಟನ್ನು ಹರಿದುಹಾಕುತ್ತಿದೆ. ಎರಡನೆಯದ್ದು, ತಮ್ಮ ವಿರುದ್ಧ ನಡೆದ ಅಪರಾಧ ಕೃತ್ಯಗಳಿಂದಾಗಿ ರಾಜ್ಯದ ತಾಯಂದಿರು ಮತ್ತು ಸಹೋದರಿಯರಲ್ಲಿ ಅಭದ್ರತೆಯ ಭಾವನೆ ಗಟ್ಟಿಯಾಗುತ್ತಿದೆ' ಎಂದು ವಿವರಿಸಿದ್ದಾರೆ.

ಮುಂದುವರಿದು, ನಿರುದ್ಯೋಗದ ಏರಿಕೆ ಹಾಗೂ ಅವಕಾಶಗಳ ಕೊರತೆಯಿಂದಾಗಿ ಯುವಕರಲ್ಲಿ ಹತಾಶೆ ಭಾವನೆ ಹೆಚ್ಚುತ್ತಿರುವುದು ಮೂರನೇ ಸಮಸ್ಯೆಯಾಗಿದೆ. ವ್ಯವಸ್ಥೆಯ ಮೇಲೆ ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುವುದಕ್ಕೆ ಕಾರಣವಾಗಿರುವ 'ವ್ಯಾಪಕ ಭ್ರಷ್ಟಾಚಾರ' ನಾಲ್ಕನೇಯದು ಎಂದು ಪ್ರತಿಪಾದಿಸಿದ್ದಾರೆ.

'ಆಡಳಿತ ಪಕ್ಷದ ಸ್ವಾರ್ಥ ರಾಜಕಾರಣ ಐದನೇ ಬಿಕ್ಕಟ್ಟಾಗಿದೆ. ಇದು, ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಮುರ್ಷಿದಾಬಾದ್ ಹಾಗೂ ಮಾಲ್ದಾದಲ್ಲಿ ನಡೆದ ಘಟನೆಗಳು ಟಿಎಂಸಿ ಸರ್ಕಾರದ ಕ್ರೌರ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವುದಕ್ಕೆ ಉದಾಹರಣೆಗಳಾಗಿವೆ' ಎಂದು ಸಾರಿದ್ದಾರೆ.

ಶಿಕ್ಷಕರ ನೇಮಕಾತಿ ಹಗರಣದ ಕುರಿತೂ ಮಾತನಾಡಿರುವ ಮೋದಿ, ಭ್ರಷ್ಟಾಚಾರ ಮತ್ತು ಅಕ್ರಮದ ಮೂಲಕ ಟಿಎಂಸಿ ಸರ್ಕಾರವು ಸಾವಿರಾರು ಶಿಕ್ಷಕರು ಮತ್ತು ಅವರ ಕುಟುಂಬಗಳ ಭವಿಷ್ಯವನ್ನು ನಾಶ ಮಾಡಿದೆ ಎಂದು ಕಿಡಿಕಾರಿದ್ದಾರೆ.
.ಅಬ್ದುಲ್ ರಹಿಮಾನ್ ಹತ್ಯೆ: ಮೂವರು ಆರೋಪಿಗಳ ಬಂಧನ.ಚಿನ್ನದ ಬೆಲೆ ಏರಿಕೆ | ಈ ಆರ್ಥಿಕ ವರ್ಷದಲ್ಲಿ ಶೇ 10ರಷ್ಟು ಬೇಡಿಕೆ ಕುಸಿತ: ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.