ಮೈಸೂರು: ಗುಜರಾತ್ನ ಪಿಪಾವಾವ್ ಬಂದರು ವಿಸ್ತರಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠ ‘ಪರಿಸರವಾದಿಗಳು ಮತ್ತು ಹೋರಾಟಗಾರರು ಅಭಿವೃದ್ಧಿ ಯೋಜನೆಗಳಿಗೆ ತಡೆಯಾಗಿದ್ದಾರೆ’ ಎಂದು ಹೇಳಿರುವುದಕ್ಕೆ ‘ಪರಿಸರಕ್ಕಾಗಿ ನಾವು’ ಸಂಘಟನೆಯು ಅಸಮ್ಮತಿ ವ್ಯಕ್ತಪಡಿಸಿದೆ.

‘ಪರಿಸರವಾದಿಗಳು ಮತ್ತು ಸಂಘಟನೆಗಳನ್ನು ಅಭಿವೃದ್ಧಿ ವಿರೋಧಿ ಶಕ್ತಿಗಳೆಂದು ಬಣ್ಣಿಸದಿರಿ. ದೇಶದ ಪರಿಸರ ಮತ್ತು ಭವಿಷ್ಯದ ಕಾಳಜಿಗಾಗಿ, ಯಾವುದೇ ಬೆಂಬಲ, ಮಾನ್ಯತೆ ಇಲ್ಲದೇ ಹೋರಾಟಗಾರರು ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ ಎಂಬುದನ್ನು ವಿನಮ್ರವಾಗಿ ಹೇಳುತ್ತಿದ್ದೇವೆ’ ಎಂದು ಸಿಜೆಐಗೆ ಬರೆದಿರುವ ಪತ್ರದಲ್ಲಿ ಹೇಳಿದೆ.

‘ಪರಿಸರವಾದಿಗಳ ವಿರುದ್ಧವಾದ ಇಂತಹ ಅನಗತ್ಯ ವಿಮರ್ಶೆಯನ್ನು ಮರುಪರಿಶೀಲಿಸಬೇಕು. ಹೇಳಿಕೆ ಹಿಂತೆಗೆದುಕೊಳ್ಳಬೇಕೆಂದು ಗೌರವಪೂರ್ವಕವಾಗಿ ಕೋರುತ್ತೇವೆ. ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತಿರುವ ನಾಗರಿಕರು ಮತ್ತು ಸಂಸ್ಥೆಗಳ ಬಗ್ಗೆ ತಪ್ಪಾದ ಸಾರ್ವಜನಿಕ ಗ್ರಹಿಕೆಯನ್ನು ಸೃಷ್ಟಿಸುವ ಅಪಾಯ ಅದರಿಂದ ಉಂಟಾಗಲಿದೆ’ ಎಂದಿದೆ.

‘ಸಂವಿಧಾನದ 51 ‘ಎ’ ವಿಧಿಯಂತೆ ದೇಶದ ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕು ಎಂಬುದನ್ನು ಪರಿಸರ ಸಂಘಟನೆಗಳು ಪಾಲಿಸುತ್ತಿವೆ’ ಎಂದು ಹೇಳಿರುವ ಸಂಘಟನೆಯು, ಪರಿಸರಕ್ಕೆ ಹಾನಿ ಮಾಡುವ ಚಾಮುಂಡಿ ಬೆಟ್ಟ ರೋಪ್ ವೇ, ಕೆಆರ್ಎಸ್ ಥೀಮ್ ಪಾರ್ಕ್, ಚಾಮಲಾಪುರ ಶಾಖೋತ್ಪನ್ನ ಘಟಕ ಯೋಜನೆ, ಶರಾವತಿ ಪಂಪ್ಡ್ ಸ್ಟೋರೇಜ್, ತಿ.ನರಸೀಪುರ ರೇಷ್ಮೆ ನೂಲು ತೆಗೆಯುವ ಘಟಕದಲ್ಲಿ ಕ್ರೀಡಾಂಗಣ ಸೇರಿದಂತೆ ವಿವಿಧ ಹೋರಾಟಗಳು ಮತ್ತು ಅದರ ಪರಿಣಾಮಗಳನ್ನು ಉಲ್ಲೇಖಿಸಿದೆ.

ಸಂಘಟನೆ ಅಧ್ಯಕ್ಷ ಎ.ಟಿ.ರಾಮಸ್ವಾಮಿ, ಕಾರ್ಯಾಧ್ಯಕ್ಷ ಆಂಜನೇಯ ರೆಡ್ಡಿ ನೀರಾವರಿ, ಉಪಾಧ್ಯಕ್ಷೆ ಎ.ಎಸ್.ಕವಿತಾ, ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮೇಗೌಡ, ಪಾರ್ವತಿ ಶ್ರೀರಾಮ, ಸಂಘಟನಾ ಕಾರ್ಯದರ್ಶಿ ಸಿ.ಎಚ್.ಸಿಕಂದರ್, ಕಾರ್ಯದರ್ಶಿ ಮಹೇಶ್ ಬಸಾಪುರ್, ಆರ್.ಎನ್.ವೇಣುಗೋಪಾಲ್ ಪತ್ರಕ್ಕೆ ಸಹಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-39-802102527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.