ಮೈಸೂರು: ‘ಕೇಂದ್ರ ಸರ್ಕಾರವು ರೂಪಿಸಿರುವ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ಜೆಂಡರ್) ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ ಹಿಂಪಡೆಯಬೇಕು ಹಾಗೂ ಮಾನವ ಹಕ್ಕುಗಳನ್ನು ಗೌರವಿಸುವ ನೂತನ ಕಾಯ್ದೆ ಜಾರಿಗೊಳಿಸಬೇಕು’ ಎಂದು ಈ ಸಮುದಾಯದ ಸಂಘಟನೆಗಳ ಒಕ್ಕೂಟದ ಪದಾಧಿಕಾರಿ ಪೃಥ್ವಿ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮುದಾಯದ ಪ್ರತಿನಿಧಿಗಳೊಂದಿಗೆ ಯಾವುದೇ ಚರ್ಚೆ ನಡೆಸದೇ ಸರ್ವಾಧಿಕಾರಿ ಧೋರಣೆ ಮೂಲಕ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಇದು ಲಿಂಗತ್ವ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವ ಬದಲಿಗೆ ಖಾಸಗಿ ಹಕ್ಕುಗಳನ್ನು ಉಲ್ಲಂಘಿಸುವ ವಿರೋಧಿ ಕಾಯ್ದೆಯಾಗಿದೆ’ ಎಂದು ದೂರಿದರು.

‘ಮಸೂದೆಯು ನಮ್ಮ ಸಮುದಾಯದವರ ಹಕ್ಕುಗಳಿಗೆ ಗಂಭೀರ ಹಾನಿ ಉಂಟು ಮಾಡು ತ್ತದೆ. ಈ ಕಾರಣಕ್ಕಾಗಿ ನಾವು ವಿರೋಧಿಸುತ್ತಿದ್ದೇವೆ’ ಎಂದರು.

‘ಮಸೂದೆ ಮೂಲಕ ಸಮಾನತೆ, ಗೌರವ ಮತ್ತು ಸ್ವಯಂ ಗುರುತಿನ ಹಕ್ಕುಗಳನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ. ಲಿಂಗ ಗುರುತಿಗೆ ವೈದ್ಯಕೀಯ ಪರಿಶೀಲನೆ ಮತ್ತು ಪ್ರಮಾಣಪತ್ರಗಳ ಮೂಲಕ ಮಾತ್ರ ಮಾನ್ಯಗೊಳಿಸುವ ವ್ಯವಸ್ಥೆ ಬೇಕೆಂದು ತಿಳಿಸಿದೆ. ಆದರೆ ಇದು, ಪ್ರತಿ ವ್ಯಕ್ತಿಗೂ ತನ್ನ ಲಿಂಗ ಗುರುತನ್ನು ಸ್ವಯಂ ನಿರ್ಧರಿಸುವ ಹಕ್ಕಿದೆ ಮತ್ತು ಯಾವುದೇ ವೈದ್ಯಕೀಯ ಅಥವಾ ಆಡಳಿತಾತ್ಮಕ ಅನುಮತಿ ಅಗತ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ನ ಆದೇಶಕ್ಕೆ ವಿರುದ್ಧ ವಾಗಿದೆ’ ಎಂದು ತಿಳಿಸಿದರು.

ಟಿ. ಶಿವರಾಮು, ಬಿ.ಎಚ್. ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-39-238531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.