ಮೈಸೂರು: ‘ಮಹಿಳಾ ಮೀಸಲು ಮಸೂದೆಗೆ ಸೋಲುಂಟಾಗಲು ಕೇಂದ್ರ ಸರ್ಕಾರವೇ ನೇರ ಕಾರಣವಾಗಿದ್ದು, ಬಿಜೆಪಿಯ ಹುನ್ನಾರಕ್ಕೆ ಜಯ ಸಿಗಲಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಕೆ.ವಿ. ಮಲ್ಲೇಶ್ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಹಿಳಾ ಮೀಸಲು ಮಸೂದೆ ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆಯ ಮಸೂದೆಯನ್ನೂ ಕೇಂದ್ರ ತಂದಿತ್ತು. ಈ ಮೂಲಕ ತನ್ನ ಕಾರ್ಯಸೂಚಿ ಜಾರಿಗೆ ಹುನ್ನಾರ ನಡೆಸಿತ್ತು. ಕೇಂದ್ರದ ಈ ಕುತಂತ್ರದ ಬಲೆಯೊಳಗೆ ಸಿಲುಕಿದ ವಿರೋಧ ಪಕ್ಷಗಳು ಮಹಿಳಾ ಮೀಸಲು ಪರವಾಗಿದ್ದರೂ ಮತ ಚಲಾಯಿಸದಂತೆ ಆಯಿತು. ಆ ಮೂಲಕ ಬಿಜೆಪಿ ತನ್ನ ಕುತಂತ್ರ ಬುದ್ಧಿಯಲ್ಲಿ ಯಶ ಸಾಧಿಸಿತು’ ಎಂದು ಟೀಕಿಸಿದ್ದಾರೆ.

‘ಕೇಂದ್ರಕ್ಕೆ ನಿಜಕ್ಕೂ ಮಹಿಳಾ ಮೀಸಲು ಜಾರಿಯ ಸದುದ್ದೇಶವಿದ್ದರೆ ತಿದ್ದುಪಡಿ ಮಸೂದೆಯನ್ನು ಪ್ರತ್ಯೇಕವಾಗಿ ಮಂಡಿಸಬೇಕಿತ್ತು. ಎರಡು ಪ್ರಮುಖ ರಾಜ್ಯಗಳ ಚುನಾವಣೆ ವೇಳೆ ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸುವ ತುರ್ತು ಏನಿತ್ತು? ಇದು ನೀತಿಸಂಹಿತೆ ಉಲ್ಲಂಘನೆ ಆಗುವುದಿಲ್ಲವೇ?’ ಎಂದು ಕೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-39-409868081

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.