ಪುದುಚೆರಿ: 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಎಐಎನ್ಆರ್ಸಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಎನ್.ರಂಗಸ್ವಾಮಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳಲು ಸಜ್ಜಾಗಿದ್ದಾರೆ.

ಎಐಎನ್ಆರ್ಸಿ ಸ್ಪರ್ಧಿಸಿದ್ದ 16 ಸ್ಥಾನಗಳಲ್ಲಿ 12ರಲ್ಲಿ ಜಯ ಗಳಿಸಿದ್ದರೆ, ಬಿಜೆಪಿ ಸ್ಪರ್ಧಿಸಿದ್ದ 10 ಸ್ಥಾನಗಳಲ್ಲಿ 4ರಲ್ಲಿ ಗೆದ್ದಿದೆ. ಎನ್ಡಿಎ ಮೈತ್ರಿಕೂಟದ ಇತರ ಪಕ್ಷಗಳಾದ ಎಐಎಡಿಎಂಕೆ ಮತ್ತು ಎಲ್ಜೆಕೆ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿವೆ.

ಇದರೊಂದಿಗೆ 30 ಸದಸ್ಯರ ಪುದುಚೆರಿ ವಿಧಾನಸಭೆಯಲ್ಲಿ ಎನ್ಡಿಎ ಮೈತ್ರಿಕೂಟವು 18 ಸ್ಥಾನಗಳನ್ನು ಪಡೆದಿದೆ. ಇದು ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 16ಕ್ಕಿಂತ ಎರಡು ಸ್ಥಾನಗಳು ಹೆಚ್ಚಾಗಿವೆ.

ಎನ್.ರಂಗಸ್ವಾಮಿ ಅವರು ಈ ಹಿಂದೆ (2001, 2006) ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದರು. 2011ರಲ್ಲಿ ಕಾಂಗ್ರೆಸ್ ತೊರೆದು ಸ್ವಂತ ಪಕ್ಷ ಕಟ್ಟಿದ್ದರು. 2011ರಲ್ಲಿ ಅವರು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ನಾಯಕಿ ಜೆ. ಜಯಲಲಿತಾ ಅವರೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಗೆದ್ದಿದ್ದರು.

ಈ ಬಾರಿ ರಂಗಸ್ವಾಮಿ ಅವರು ತಟ್ಟಂಚವಾಡಿ ಮತ್ತು ಮಂಗಲಂ ಕ್ಷೇತ್ರಗಳೆರಡಲ್ಲೂ ಗೆಲುವು ಸಾಧಿಸಿದ್ದಾರೆ. ತಮ್ಮ ಭದ್ರಕೋಟೆಯಾದ ತಟ್ಟಾಂಚಾವಡಿ ಕ್ಷೇತ್ರದಲ್ಲಿ ಅವರು ‘ನೇಯಂ ಮಕ್ಕಳ್ ಕಳಗಂ’ ಪಕ್ಷದ ಇ. ವಿನಾಯಗಂ ಅವರನ್ನು 4,441 ಮತಗಳಿಂದ ಸೋಲಿಸಿದರೆ, ಮಂಗಳಂ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಎಸ್.ಎಸ್. ರಂಗನ್ ವಿರುದ್ಧ 7,050 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟವು ಕೇವಲ ಆರು ಸ್ಥಾನಗಳನ್ನು (ಡಿಎಂಕೆ ಐದು ಮತ್ತು ಕಾಂಗ್ರೆಸ್ ಒಂದು) ಗಳಿಸಿದೆ. ಹಾಲಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ವಿ. ವೈತಿಲಿಂಗಂ ಸೇರಿದಂತೆ ಮೈತ್ರಿಕೂಟದ ಪ್ರಮುಖ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ತಟ್ಟಂಚವಾಡಿ ಕ್ಷೇತ್ರದಲ್ಲಿ ವೈತಿಲಿಂಗಂ ವಿರುದ್ಧ ರಂಗಸ್ವಾಮಿ ಗೆದ್ದಿದ್ದಾರೆ.

ಹೊಸ ರಾಜಕೀಯ ಪಕ್ಷವಾದ ಟಿಟಿಕೆ ಎರಡು ಸ್ಥಾನಗಳನ್ನು ಗೆದ್ದಿದ್ದರೆ, ‘ನೇಯಂ ಮಕ್ಕಳ್ ಕಳಗಂ’ ಪಕ್ಷವು ಒಂದು ಸ್ಥಾನ ಪಡೆದಿದೆ. ನೆಡುಂಕಾಡು ಮೀಸಲು ಕ್ಷೇತ್ರ, ಕದಿರ್ಕಾಮಮ್ ಮತ್ತು ಮಾಹೆ ಕ್ಷೇತ್ರಗಳಿಂದ ಮೂವರು ಪಕ್ಷೇತರರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಹಲವು ಬಾರಿ ಪುದುಚೆರಿಯನ್ನು ಆಳಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿ ನೀರಸ ಪ್ರದರ್ಶನ ತೋರಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ 16 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ಪಿಸಿಸಿ ನಾಯಕ ಮತ್ತು ಲೋಕಸಭಾ ಸದಸ್ಯ ವೈತಿಲಿಂಗಂ, ಡಿಎಂಕೆ ಪುದುಚೆರಿ ಘಟಕದ ಕಾರ್ಯದರ್ಶಿ ಆರ್.ಶಿವ ಕೂಡ ಚುನಾವಣೆಯಲ್ಲಿ ಸೋತಿದ್ದಾರೆ.

ಕಲಪೆಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಲೋಕೋಪಯೋಗಿ ಸಚಿವ ಶಾಜಹಾನ್ ಸೇರಿದಂತೆ ಕಾಂಗ್ರೆಸ್ನ ಆರು ಮಂದಿ ಬಂಡಾಯ ಅಭ್ಯರ್ಥಿಗಳು ಸೋಲಿನ ರುಚಿ ಕಂಡಿದ್ದಾರೆ. ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದಾರೆ.
.ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಮುಸ್ಲಿಮರೇ ಹೆಚ್ಚು!.ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಾಜೀನಾಮೆ ಅಂಗೀಕಾರ.ನಾವು ಕಾಣದ ಗೆಲುವಿಲ್ಲ.. ಎದುರಿಸದ ಸೋಲಿಲ್ಲ: ಮತ್ತೆ ಗೆಲ್ಲುತ್ತೇವೆ ಎಂದ ಸ್ಟಾಲಿನ್.ಬಂಗಾಳದಲ್ಲಿ ಚುನಾವಣಾ ಆಯೋಗದ ಕೈವಾಡದಿಂದಲೇ ಬಿಜೆಪಿ ಗೆದ್ದಿದೆ: ಮೆಹಬೂಬಾ ಮುಫ್ತಿ.ಜನಾದೇಶವೇ ಸರ್ವೋಚ್ಚ: ಬಂಗಾಳದಲ್ಲಿ ಬಿಜೆಪಿ ಗೆಲುವಿನ ಕುರಿತು ಮಹುವಾ ಮೊಯಿತ್ರಾ.ಮೇ 9ಕ್ಕೆ ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಪ್ರಮಾಣ ವಚನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.