ನಾಗ್ಪುರ: ನಾಗ್ಪುರದ ಸರ್ಕಾರಿ ಡಾಗಾ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಹೆರಿಗೆ ಮಾಡಿಸಲು ಸುದೀರ್ಘ 9 ಗಂಟೆ ಕಾಯಿಸಿದ ಪರಿಣಾಮ ಮಗು ಮೃತಪಟ್ಟಿದ್ದು, ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.

ಪತ್ನಿ ದೀಪಲತಾ ಬನೋಟೆರಳನ್ನು ಆಸ್ಪತ್ರೆಗೆ ಕರೆದೊಯ್ದು ಸುಮಾರು ಒಂಬತ್ತು ಗಂಟೆಗಳ ನಂತರ ಹೆರಿಗೆಗೆ ಕರೆದೊಯ್ಯಲಾಗಿದೆ. ಅಷ್ಟು ಸಮಯವೂ ಆಕೆ ನೋವಿನಿಂದ ಬಳಲುತ್ತಿದ್ದಳು ಎಂದು ಪತಿ ಸುರೇಂದ್ರ ಬಾನೋಟೆ ಆರೋಪಿಸಿದ್ದಾರೆ.

ಹೆರಿಗೆ ಸಮಯದಲ್ಲಿ ಮಹಿಳಾ ಸಹಾಯಕರೊಬ್ಬರು ಗರ್ಭಿಣಿಯ ಎದೆಯ ಮೇಲೆ ಕುಳಿತು ಮೊಣಕಾಲುಗಳ ಮೂಲಕ ಹೊಟ್ಟೆ ಮೇಲೆ ಒತ್ತಡ ಹಾಕುವ ಮೂಲಕ ಪ್ರಸವಕ್ಕೆ ಯತ್ನಿಸಿದ್ದಾರೆ ಎಂದೂ ಸುರೇಂದ್ರ ಬನೋಟೆ ಆರೋಪಿಸಿದ್ದಾರೆ.

ಹೆರಿಗೆಯು ಸಹಜವಾಗಿಯೇ ಆಯಿತು ಎಂದು ವರದಿಗಳು ಸೂಚಿಸಿವೆಯಾದರೂ, ಮಗು ಜನಿಸಿದಾಗಲೇ ಮೃತಪಟ್ಟಿತ್ತು ಎಂದು ಕುಟುಂಬ ತಿಳಿಸಿದೆ.

ಈ ಘಟನೆಯು ನಾಗ್ಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮತ್ತು ಹೆರಿಗೆ ಪದ್ಧತಿಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂದಿರುವ ವೈದ್ಯಕೀಯ ಅಧೀಕ್ಷಕ ದಿಲೀಪ್ ಮಾಧವಿ, ಕ್ಯಾಮೆರಾ ಎದುರು ವಿವರವಾದ ಹೇಳಿಕೆಯನ್ನು ನೀಡಲು ನಿರಾಕರಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿನ ಚಿಕಿತ್ಸೆ ಮತ್ತು ಸಿಬ್ಬಂದಿ ವರ್ತನೆ ಬಗ್ಗೆ ಆಗಾಗ್ಗೆ ದೂರು ದಾಖಲಾಗುತ್ತಿರುತ್ತವೆ ಎಂದು ಕೌನ್ಸಿಲರ್ ವಾಸೀಂ ಕಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.