ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಗಡ: ವಿಚಾರಣೆಗೆ ಕೇಂದ್ರ ಸಚಿವ ನಾರಾಯಣ ರಾಣೆ ಗೈರು

Last Updated 30 ಆಗಸ್ಟ್ 2021, 11:18 IST
ಅಕ್ಷರ ಗಾತ್ರ

ಅಲಿಬಾಗ್‌: ‘ಅನಾರೋಗ್ಯದ ಕಾರಣ ನಾರಾಯಣ ರಾಣೆ ಅವರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ’ ಎಂದು ರಾಣೆ ಪರ ವಕೀಲಸಂದೇಶ್‌ ಚಿಕ್ನೆ ಅವರು ತಿಳಿಸಿದ್ದಾರೆ.

ರಾಣೆ ಪರವಾಗಿ ವಕೀಲ ಸಂದೇಶ್‌ ಚಿಕ್ನೆ ಅವರು ಸ್ಥಳೀಯ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್‌ ದಯಾನಂದ ಗಾವಡೆ ಅವರ ಕಚೇರಿಗೆ ಹಾಜರಾಗಿದ್ದರು.

ರಾಣೆ ಅವರ ಆರೋಗ್ಯ ಸರಿಯಿಲ್ಲ. ಹಾಗಾಗಿ ಅವರಿಗೆ ಬರಲು ಸಾಧ್ಯವಾಗಿಲ್ಲ ಎಂದು ಅವರು ಪೊಲೀಸರಿಗೆ ತಿಳಿಸಿದರು. ಸಂದೇಶ್‌ ಚಿಕ್ನೆ ಅವರ ಜತೆಗೆ ಕೆಲವು ಬಿಜೆಪಿ ನಾಯಕರೂ ಆಗಮಿಸಿದ್ದರು.

‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದ ರಾಣೆ ಅವರನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿತ್ತು. ರಾತ್ರಿ ವೇಳೆಗೆ ಅವರನ್ನು ಮಹಡ್‌ನ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪ‍ಡಿಸಲಾಗಿತ್ತು.

ನ್ಯಾಯಾಲಯ ರಾಣೆಗೆ ಜಾಮೀನು ಮಂಜೂರು ಮಾಡಿತ್ತು. ಆಗಸ್ಟ್‌ 30 ಮತ್ತು ಸೆಪ್ಟೆಂಬರ್‌ 13ರಂದು ರಾಯಗಡದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಹಾಜರಾಗುವಂತೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT