ನವದೆಹಲಿ (ಪಿಟಿಐ): ‘ಭಾರತದ ಪ್ರತಿಯೊಂದು ಭಾಗವು ಪವಿತ್ರವಾದುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಉಲ್ಲೇಖಿಸಿದ್ದಾರೆ.

ಸೋಮನಾಥ ದೇಗುಲವು ಜೀರ್ಣೋದ್ಧಾರಗೊಂಡು ಭಕ್ತರಿಗೆದರ್ಶನ ನೀಡಲಿಕ್ಕಾಗಿ ಪುನರಾರಂಭಗೊಂಡ 75ನೇ ವಾರ್ಷಿಕೋತ್ಸವದ (ಮೇ 11) ಅಂಗವಾಗಿ ಬರೆದಿರುವ ಲೇಖನದಲ್ಲಿ ಪ್ರಧಾನಿಯು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

‘ಭೌಗೋಳಿಕತೆಯನ್ನು ಮೀರಿದ ಏಕತೆಯ ಪ್ರಜ್ಞೆಯಿಂದ ಭಾರತ ಒಂದಾಗಿದೆ’ ಎಂದಿರುವ ಮೋದಿ, ‘ವಿಭಜನೆಗಳಿಂದ ಗುರುತಿಸಲ್ಪಟ್ಟಿರುವ ಜಗತ್ತಿನಲ್ಲಿ, ಭಾರತದ ಏಕತೆಯ ಮನೋಭಾವವು ಎಂದಿಗಿಂತಲೂ ಇದೀಗ ಹೆಚ್ಚು ಪ್ರಸ್ತುತವಾಗಿದೆ’ ಎಂದಿದ್ದಾರೆ.

‘ಸೋಮನಾಥನು ತನ್ನ ಸಕಲ ವೈಭವದಲ್ಲಿ ಎತ್ತರಕ್ಕೆ ನಿಂತಿದ್ದಾನೆ. ಏಕೆಂದರೆ, ಏಕತೆ ಹಾಗೂ ನಾಗರಿಕತೆಯ ಪ್ರಜ್ಞೆಯು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ನೆಲಸಿದೆ’ ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ದೇಗುಲದ ರಕ್ಷಣೆಗಾಗಿ ಗುಜರಾತ್ನಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದವರ ಹೋರಾಟ, ತ್ಯಾಗವನ್ನು ಮರೆಯಲಾಗಲ್ಲ ಎಂದಿದ್ದಾರೆ.

‘ಭಾರತೀಯರು ಸೋಮನಾಥನ ದರ್ಶನ ಪಡೆಯಬೇಕು’ ಎಂದೂ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1489260499

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.