ರಾಯ್ಬರೇಲಿ: ‘ದೇಶದ ಜನರಿಗೆ ವಿದೇಶ ಪ್ರವಾಸ ಕೈಗೊಳ್ಳಬೇಡಿ ಎಂದು ಮನವಿ ಮಾಡುವ ಪ್ರಧಾನಿ ನರೇಂದ್ರ ಮೋದಿ, ತಾವು ಮಾತ್ರ ಒಂದೊಮ್ಮೆ ನಾರ್ವೆಗೆ, ಇನ್ನೊಮ್ಮೆ ಜಪಾನ್ಗೆ ಪ್ರವಾಸ ಮಾಡುತ್ತಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಬಚ್ಚರಾವನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರ ಬದಲಾಗುವವರೆಗೂ ಹಣದುಬ್ಬರ ಹೆಚ್ಚುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

‘ಪ್ರಧಾನಿ ಮೋದಿ ಅವರು ನಾಗರಿಕರಿಗೆ ಚಿನ್ನವನ್ನು ಖರೀದಿಸಬೇಡಿ, ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಮತ್ತು ವಿದೇಶಕ್ಕೆ ಪ್ರಯಾಣಿಸುವುದರಿಂದ ದೂರವಿರಿ ಎಂದು ವಿನಂತಿಸಿದ್ದಾರೆ. ಆದರೆ, ಅದರ ಬೆನ್ನಲ್ಲೇ ತಾವು ವಿದೇಶ ಪ್ರವಾಸ ಕೈಗೊಂಡಿದ್ದಾರೆ’ ಎಂದು ಲೇವಡಿ ಮಾಡಿದ್ದಾರೆ.

‘ವಿಷಾದ ಸಂಗತಿ ಏನೆಂದರೆ, ದೇಶವು ಹಿಂದೆಂದೂ ಕಂಡರಿಯದ ಆರ್ಥಿಕ ಹೊಡೆತವನ್ನು ಎದುರಿಸಲಿದೆ. ಇದರಿಂದ ಯಾರಿಗೆ ಹಾನಿಯಾಗುತ್ತದೆ. ಅಂಬಾನಿ ಅಥವಾ ಅದಾನಿಗಲ್ಲ. ಅವರು ನಾಲ್ಕು ಕಡೆ ಭದ್ರತೆ ಹೊಂದಿರುವ ತಮ್ಮ ಅರಮನೆಗಳಲ್ಲೇ ಇರುತ್ತಾರೆ. ದೇಶದ ರೈತರು, ಕಾರ್ಮಿಕರು, ಯುವಕರು, ಸಣ್ಣ ಉದ್ಯಮಿಗಳು ಇದರಿಂದ ನೋವು ಅನುಭವಿಸುತ್ತಾರೆ’ ಎಂದು ಹೇಳಿದ್ದಾರೆ.

‘ರಾಹುಲ್ ಗಾಂಧಿಗೆ ಬುದ್ಧಿಯಿಲ್ಲ ಎನ್ನುತ್ತಾರೆ’

‘ಇಂಧನ ಬೆಲೆಗಳು ಏರಿಕೆಯಾಗುತ್ತಿದೆ, ಹಣದುಬ್ಬರವು ಗಗನಕ್ಕೇರಲಿದೆ. ಇಷ್ಟೇಲ್ಲಾ ನಡೆಯುತ್ತಿದ್ದರೂ ಅದನ್ನು ಪ್ರಶ್ನೆ ಮಾಡುವ ನನಗೆ ಏನೂ ತಿಳಿದಿಲ್ಲ ಎಂದು ಅವರು(ಬಿಜೆಪಿ) ಹೇಳುತ್ತಾರೆ.

‘ಪರಿಹಾರ ಕ್ರಮ ಕೈಗೊಳ್ಳಿ, ದೇಶದ ಜನರನ್ನು ಉಳಿಸಿ ಎಂದು ನಾವು ಹೇಳುತ್ತಲೇ ಇದ್ದೇವೆ. ಆದರೆ ಅವರು(ಮೋದಿ) ವಿದೇಶಕ್ಕೆ ಹೋಗಿ, ‘ಸಹೋದರರೇ... ಅದಾನಿ, ಅಂಬಾನಿಗೆ ಸಹಾಯ ಮಾಡಿ ಎನ್ನುತ್ತಾರೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇದು ಹೀಗೆ ಮುಂದುವರಿದರೆ ಅದಾನಿ ಮತ್ತು ಅಂಬಾನಿ ಮತ್ತಷ್ಟು ಶ್ರೀಮಂತರಾಗುತ್ತಾರೆ. ನಿಮ್ಮ ಸಂಪೂರ್ಣ ಹಣ ಅವರ ಜೇಬಿಗೆ ಹೋಗುತ್ತದೆ. ನಿಮ್ಮ ಹಣದಿಂದ ಮತ್ತೊಂದು ಅರಮನೆಯನ್ನು ಅವರು ಕಟ್ಟುತ್ತಾರೆ. ಇಡೀ ವ್ಯವಸ್ಥೆಯನ್ನು ನಿಮ್ಮ ಜೇಬಿನಿಂದ ಹಣ ಕಬಳಿಸಲು ರೂಪಿಸಲಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ಏನೇ ಸಂದರ್ಭ ಬರಲಿ, ನಾವು ನಿಮ್ಮೊಂದಿಗೆ ಇರುತ್ತೇವೆ. ನಿಮ್ಮ ಪರ ದೃಢವಾಗಿ ನಿಲ್ಲುತ್ತೇವೆ. ನಿಮಗೆ ನನ್ನ ಸಹಾಯ ಬೇಕಿದ್ದರೆ ನನ್ನನ್ನು ಕರೆಯಬಹುದು’ ಎಂದು ಭರವಸೆ ನೀಡಿದ್ದಾರೆ.

‘ಅಂಬಾನಿ ಕುಟುಂಬದ ಮದುವೆಗೆ ಹೋಗಿದ್ದು ಯಾರು?’

‘ಮುಖೇಶ್ ಅಂಬಾನಿ ಅವರ ಕುಟುಂಬದ ಮದುವೆಗೆ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೋಗಿದ್ದರು. ನಾನು ಹೋದೆನಾ?. ಇಲ್ಲ... ನಾನು ನಿಮ್ಮ ಮದುವೆಯಲ್ಲಿ ಪಾಲ್ಗೊಳ್ಳಲು ಬಯಸುತ್ತೇನೆ. ನಿಮ್ಮ ಮನೆಗೆ ಬರಲು ಬಯಸುತ್ತೇನೆ. ಅಲ್ಲಿಗೆ ಹೋಗಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.