ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ಟೀಕಿಸುವುದಕ್ಕಾಗಿ, ಹುದ್ದೆಯ ಕಾರಣದಿಂದಾಗಿ ತಮಗೆ ದೊರೆತಿರುವ ರಾಷ್ಟ್ರೀಯ ವೇದಿಕೆಯನ್ನು ಬಳಸಿಕೊಂಡಿರುವುದು ದುರದೃಷ್ಟಕರ. ಲೋಕಸಭೆಯಲ್ಲಿ ಮಹಿಳಾ ಮೀಸಲು ಕಾನೂನಿಗೆ ಸಾಂವಿಧಾನಿಕ ತಿದ್ದುಪಡಿ ಮಾಡುವ ಪ್ರಯತ್ನವು ವಿಫಲವಾದ ನಂತರ, ರಾಷ್ಟ್ರೀಯ ವೇದಿಕೆಯ ಮೂಲಕ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಟೀಕಾಪ್ರಹಾರ ನಡೆಸಿದ್ದಾರೆ. ಕಳೆದ ಶುಕ್ರವಾರ (ಏಪ್ರಿಲ್ 17) ಸದನದಲ್ಲಿ ಮಸೂದೆ ಸೋಲು ಕಂಡಿತು; ಶನಿವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಮಹಿಳಾ ಮೀಸಲಾತಿ ಪ್ರಕ್ರಿಯೆಯನ್ನು ಹತ್ತಿಕ್ಕಿದ್ದಕ್ಕಾಗಿ ವಿರೋಧ ಪಕ್ಷಗಳನ್ನು, ವಿಶೇಷವಾಗಿ ಕಾಂಗ್ರೆಸ್, ಡಿಎಂಕೆ ಹಾಗೂ ತೃಣಮೂಲ ಕಾಂಗ್ರೆಸ್ಗಳನ್ನು ಕಟುವಾದ ಶಬ್ದಗಳಲ್ಲಿ ಟೀಕಿಸಿದ್ದಾರೆ. ಎರಡು ಪ್ರಮುಖ ರಾಜ್ಯಗಳಾದ ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ತಮ್ಮ ರಾಜಕೀಯ ಭಾಷಣಕ್ಕಾಗಿ ರಾಷ್ಟ್ರೀಯ ವೇದಿಕೆಯನ್ನು ಬಳಸಿಕೊಂಡಿರುವುದು ಅನುಚಿತವಾದ ಹಾಗೂ ಚುನಾವಣೆ ಸಂದರ್ಭದಲ್ಲಿನ ಮಾದರಿ ನೀತಿಸಂಹಿತೆಯ ಉಲ್ಲಂಘನೆಯ ರೂಪದಲ್ಲಿ ನೋಡಬಹುದಾದ ನಡವಳಿಕೆಯಾಗಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅಥವಾ ರಾಷ್ಟ್ರೀಯ ಮಹತ್ವದ ವಿಷಯಗಳ ಬಗ್ಗೆ ಜನರ ಗಮನಸೆಳೆಯುವುದಕ್ಕಾಗಿ ಪ್ರಧಾನ ಮಂತ್ರಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಮಸೂದೆಯೊಂದು ಸದನದ ಅನುಮೋದನೆ ಪಡೆಯಲು ವಿಫಲವಾದ ಸಂದರ್ಭ ರಾಷ್ಟ್ರೀಯ ತುರ್ತು ಪರಿಸ್ಥಿತಿಯೂ ಅಲ್ಲ, ಜನರ ಗಮನವನ್ನು ತುರ್ತಾಗಿ ಸೆಳೆಯಬೇಕಾದ ಸಂಗತಿಯೂ ಆಗಿರಲಿಲ್ಲ. ಹಾಗಾಗಿ, ಅಧಿಕಾರ ದುರುಪಯೋಗದ ರೂಪದಲ್ಲಿ ಪ್ರಧಾನಿ ಅವರ ಭಾಷಣವನ್ನು ನೋಡಬಹುದಾಗಿದೆ.

ಚುನಾವಣೆಯ ಸಮಯದಲ್ಲಿ ಅಧಿಕೃತ ಸಮೂಹ ಮಾಧ್ಯಮವನ್ನು ರಾಜಕೀಯ ಸುದ್ದಿಗಳ ಪಕ್ಷಪಾತದ ವರದಿಗಾಗಿ ಹಾಗೂ ಅಧಿಕಾರದಲ್ಲಿ ಇರುವ ಪಕ್ಷದ ಹಿತಾಸಕ್ತಿಗೆ ಪೂರಕವಾಗಿ, ಸಾಧನೆಗಳ ಪ್ರಚಾರಕ್ಕಾಗಿ ದುರುಪಯೋಗ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಆಡಳಿತದಲ್ಲಿರುವ ಪಕ್ಷಕ್ಕೆ ಸಂಬಂಧಿಸಿದಂತೆ ಚುನಾವಣಾ ನೀತಿಸಂಹಿತೆ ಸ್ಪಷ್ಟವಾಗಿ ಹೇಳುತ್ತದೆ. ವಿರೋಧ ಪಕ್ಷಗಳ ಮೇಲೆ ರಾಜಕೀಯ ಟೀಕಾಪ್ರಹಾರ ನಡೆಸುತ್ತ, ಅವುಗಳಿಗೆ ಬುದ್ಧಿ ಕಲಿಸಬೇಕೆಂದು ಜನರಿಗೆ ಕರೆನೀಡಲು ದೂರದರ್ಶನವನ್ನು ಬಳಸಿಕೊಳ್ಳುವುದು ಚುನಾವಣಾ ನೀತಿಸಂಹಿತೆಗೆ ವಿರುದ್ಧವಾಗಿದೆ. ಪ್ರಧಾನಿ ಅವರ ಈ ದುರುಪಯೋಗವನ್ನು, 1975ರ ರಾಯ್ ಬರೇಲಿ ಚುನಾವಣೆ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರಿಂದಾದ ಮಾದರಿ ನೀತಿಸಂಹಿತೆಯ ಉಲ್ಲಂಘನೆಯೊಂದಿಗೆ ಹೋಲಿಸಲಾಗುತ್ತಿದೆ. ಪ್ರಸಕ್ತ ಉಲ್ಲಂಘನೆಯ ಬಗ್ಗೆ ವಿರೋಧ ಪಕ್ಷಗಳು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ದೂರು ನೀಡಿವೆ. ಆದರೆ, ಅಷ್ಟೇನೂ ಗಂಭೀರವಲ್ಲದ ದೂರುಗಳ ಸಂದರ್ಭದಲ್ಲಿಯೇ ಕ್ರಮ ಕೈಗೊಳ್ಳದ ಆಯೋಗ, ಪ್ರಸ್ತುತ ಅತ್ಯಂತ ಗಂಭೀರವಾದ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸಂದೇಹವಿದೆ. ಆಯೋಗ ಕ್ರಮ ಕೈಗೊಳ್ಳದೆ ಹೋದಲ್ಲಿ ನ್ಯಾಯಾಲಯಗಳು ಕ್ರಮ ಕೈಗೊಳ್ಳಬಹುದಾಗಿದೆ.

ಪ್ರಧಾನಿ ಅವರ ದೂರದರ್ಶನ ಭಾಷಣವು ಕಠಿಣ ಶಬ್ದಗಳನ್ನು ಒಳಗೊಂಡಿತ್ತು ಹಾಗೂ ಕೆಲವೊಮ್ಮೆ ಸಭ್ಯತೆಯ ಎಲ್ಲೆ ಮೀರಿತ್ತು. ಮಸೂದೆ ಕುರಿತಂತೆ ವಿರೋಧ ಪಕ್ಷಗಳ ನಿಲುವನ್ನು ವಿವರಿಸಲು ‘ಭ್ರೂಣಹತ್ಯೆ’ ಹಾಗೂ ‘ಪಾಪ’ ಎನ್ನುವಂತಹ ಭಾವನಾತ್ಮಕ ಹಾಗೂ ಧಾರ್ಮಿಕ ಅರ್ಥಗಳನ್ನು ಹೊಂದಿರುವ ಪರಿಭಾಷೆಯನ್ನು ಪ್ರಧಾನಿ ಬಳಸಿದ್ದು ನ್ಯಾಯಯುತವೆಂದು ಒಪ್ಪುವುದು ಸಾಧ್ಯವಿಲ್ಲ. ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಗಂಭೀರ ಸಮಾಲೋಚನೆ ನಡೆಸದೆಯೇ ಸರ್ಕಾರ ಸದನದಲ್ಲಿ ಮಸೂದೆ ಮಂಡಿಸಿತ್ತು. ಹಾಗಾಗಿ, ಮಸೂದೆಯ ಸೋಲಿನಲ್ಲಿ ವಿರೋಧ ಪಕ್ಷಗಳಂತೆ ಸರ್ಕಾರದ ಸಮಾನ ಪಾತ್ರವೂ ಇದೆ. ಅನುಮೋದನೆ ಪಡೆಯುವಲ್ಲಿ ವಿಫಲವಾಗುತ್ತದೆ ಎನ್ನುವುದನ್ನು ತಿಳಿದೂ ಸದನದ ಮುಂದೆ ಮಸೂದೆ ತಂದದ್ದನ್ನು ಗಮನಿಸಿದರೆ, ಸರ್ಕಾರದ ಪ್ರಯತ್ನದ ಹಿಂದೆ ರಾಜಕೀಯ ಉದ್ದೇಶಗಳಿದ್ದವು ಎಂದೇ ಅರ್ಥ. ಪ್ರಧಾನಿ ಅವರ ಭಾಷಣದಲ್ಲೂ ಆ ರಾಜಕೀಯ ಉದ್ದೇಶವೇ ಇತ್ತು. ಇಡೀ ಪ್ರಕರಣವು, ಮಹಿಳಾ ಮೀಸಲಾತಿ ವಿಷಯವು ರಾಜಕೀಯ ಪಕ್ಷಗಳಿಗೆ ಆಯುಧವಾಗಿದೆಯೇ ಹೊರತು, ಬದ್ಧತೆಯಾಗಿಲ್ಲ ಎನ್ನುವುದನ್ನು ಮತ್ತೊಮ್ಮೆ ಬಹಿರಂಗಪಡಿಸುವಂತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-22340250

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.