ನವದೆಹಲಿ: ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ದೊಡ್ಡ ಅಥವಾ ಸಣ್ಣ, ಉತ್ತರ ಅಥವಾ ದಕ್ಷಿಣ, ಪೂರ್ವ ಅಥವಾ ಪಶ್ಚಿಮದ ಯಾವುದೇ ರಾಜ್ಯಗಳ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು. ಈ ಸುಧಾರಣೆ ವಿರೋಧಿಸುವವರನ್ನು ದೇಶದ ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಲೋಕಸಭೆಯಲ್ಲಿ ಮೂರು ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅವರು, ಕ್ಷೇತ್ರ ಪುನರ್ ವಿಂಗಡಣೆಯಿಂದ ಯಾವುದೇ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಆಗುವುದಿಲ್ಲ ಎಂದರು.

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಆದಷ್ಟು ಬೇಗ ಜಾರಿಗೆ ತರುವ ಬಗ್ಗೆ ಒಮ್ಮತಕ್ಕೆ ಕರೆ ನೀಡಿದ ಅವರು, ‘2029ರಲ್ಲಿ ಮಹಿಳಾ ಮೀಸಲಾತಿ ಕಾನೂನನ್ನು ಅನುಷ್ಠಾನಗೊಳಿಸಿದ ಕೀರ್ತಿಯನ್ನು ಪಡೆಯಲು ಆಡಳಿತ ಪಕ್ಷ ಬಯಸುವುದಿಲ್ಲ. ಯಶಸ್ಸು ಎಲ್ಲ ನಾಗರಿಕರಿಗೆ ಮತ್ತು ಅಂತಿಮವಾಗಿ ಭಾರತದ ಪ್ರಜಾಪ್ರಭುತ್ವಕ್ಕೆ ಸಲ್ಲುತ್ತದೆ’ ಎಂದರು.

‘ನೀವು ಮಸೂದೆಯನ್ನು ವಿರೋಧಿಸಿದರೆ, ನಾನು ರಾಜಕೀಯ ಲಾಭ ಪಡೆಯುವುದು ಸಹಜ. ಆದರೆ, ನೀವು ಜೊತೆಯಾಗಿ ಸಾಗಿದರೆ, ಯಾರಿಗೂ ಯಾವುದೇ ರಾಜಕೀಯ ಲಾಭ ಸಿಗುವುದಿಲ್ಲ’ ಎಂದು ವಿಪಕ್ಷ ಸದಸ್ಯರನ್ನು ಉದ್ದೇಶಿಸಿ ಹೇಳಿದರು. ‘ಇಲ್ಲಿ ಯಾರಾದರೂ ತಮ್ಮ ಫೋಟೊ ಪ್ರಕಟಿಸಬಹುದು. ಶ್ರೇಯಸ್ಸು ಪಡೆಯಲು ನಾನು ನಿಮಗೆ ಖಾಲಿ ಚೆಕ್ ನೀಡುತ್ತೇನೆ’ ಎಂದು ಅವರು ಹೇಳಿದರು.

‘ಖಾತರಿ (ಗ್ಯಾರಂಟಿ)’ ಎಂಬ ಪದದ ಅಗತ್ಯವಿದ್ದರೆ, ನಾನು ‘ಖಾತರಿ’ ಎಂಬ ಪದ ಬಳಸುತ್ತೇನೆ. ನೀವು ಭರವಸೆಯ ಬಗ್ಗೆ ಮಾತನಾಡಿದರೆ, ನಾನು ‘ಭರವಸೆ’ ಎಂಬ ಪದ ಬಳಸುತ್ತೇನೆ. ತಮಿಳಿನಲ್ಲಿ ಇದಕ್ಕಿಂತ ಉತ್ತಮವಾದ ಪದವಿದ್ದರೆ, ನಾನು ಅದನ್ನು ಬಳಸಲು ಸಿದ್ಧನಿದ್ದೇನೆ. ಉದ್ದೇಶ ಸ್ಪಷ್ಟವಾಗಿದ್ದರೆ, ನಾವು ಪದಗಳೊಂದಿಗೆ ಆಟವಾಡುವ ಅಗತ್ಯವಿಲ್ಲ’ ಎಂದು ಮೋದಿ ಹೇಳಿದರು.

ಈ ವಿಷಯವನ್ನು ರಾಜಕೀಯ ತಕ್ಕಡಿಯಲ್ಲಿ ತೂಗಬೇಡಿ ಎಂದು ಮನವಿ ಮಾಡುತ್ತಿದ್ದೇನೆ. ಇದು ರಾಷ್ಟ್ರೀಯ ಹಿತಾಸಕ್ತಿಯ ನಿರ್ಧಾರ. ದೇಶದಾದ್ಯಂತ ಮತ್ತು ಪ್ರಪಂಚದಾದ್ಯಂತದ ಮಹಿಳೆಯರು ನಮ್ಮನ್ನು ಗಮನಿಸುತ್ತಿದ್ದಾರೆ. ನಮ್ಮ ಉದ್ದೇಶದಲ್ಲಿ ಯಾವುದೇ ದೋಷವಿದ್ದರೆ, ಈ ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.