ಮುಂಬೈ: ವಿವಿಧ ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿಸಲಾಗಿರುವ ಸ್ವಯಂ ಘೋಷಿತ ದೇವಮಾನವ ‘ಕ್ಯಾಪ್ಟನ್’ ಅಶೋಕ್ ಖರಾತ್, ರಾಜನಂತೆ ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ.

ಮಹಾರಾಷ್ಟ್ರದ ನಾಸಿಕ್ ಮತ್ತು ಅಹಲ್ಯಾನಗರ ಜಿಲ್ಲೆಗಳಲ್ಲಿನ ಆಸ್ತಿಗಳ ಮೇಲೆ ಹೂಡಿಕೆ ಮಾಡಿದ್ದ ಖರಾತ್ ಬಳಿ ₹ 100 ಕೋಟಿಯಿಂದ ₹150 ಕೋಟಿ ಮೌಲ್ಯದ ಸಂಪತ್ತಿದೆ ಎಂದು ತನಿಖೆಯಿಂದ ಗೊತ್ತಾಗಿದೆ.

ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞ, ಸಂಮೋಹನಶಾಸ್ತ್ರಜ್ಞ ಮತ್ತು ಕಾಸ್ಮೊಲಜಿಸ್ಟ್ ಎಂದು ಹೇಳಿಕೊಳ್ಳುವ ಖರಾತ್ (67) ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ ಆರು ಎಫ್ಐಆರ್ಗಳು ದಾಖಲಾಗಿದ್ದು, ಈ ಪ್ರಕರಣಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸುತ್ತಿದೆ.

ಖರಾತ್ ಕಚೇರಿ, ಫಾರ್ಮ್ಹೌಸ್ ಮತ್ತು ಅವರಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ ಎಸ್ಐಟಿ ಅಧಿಕಾರಿಗಳು ₹ 6.53 ಲಕ್ಷ ನಗದು, ಎರಡು ಲ್ಯಾಪ್ಟಾಪ್ಗಳು, ಹಲವು ಮೊಬೈಲ್ಗಳು, ಒಂದು ಡಿವಿಆರ್ ಸೇರಿದಂತೆ ಆಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ವಿಶ್ವಾಸ್ ಕೋ–ಆಪರೇಟಿವ್ ಬ್ಯಾಂಕ್ ಮತ್ತು ಸಾರಸ್ವತ ಬ್ಯಾಂಕ್ಗಳ ಖಾತೆಗಳಲ್ಲಿ ಖರಾತ್ ಒಟ್ಟು ₹ 40.87 ಕೋಟಿ ಠೇವಣಿ ಇರಿಸಿರುವುದು ಪತ್ತೆಯಾಗಿದೆ. ಜತೆಗೆ ಪತ್ನಿ ಹೆಸರಲ್ಲಿ 20 ತೊಲ ಚಿನ್ನ ಮತ್ತು ಅವರ ಹೆಸರಿನಲ್ಲಿ 12 ತೊಲ ಚಿನ್ನವನ್ನು ಬ್ಯಾಂಕ್ಗಳಲ್ಲಿ ಇರಿಸಿದ್ದರು.

ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕ, ಫ್ರಾನ್ಸ್, ಆಸ್ಟ್ರೇಲಿಯಾ, ಯುಎಇ, ಪೆರು, ಮಲೇಷ್ಯಾ, ಇಂಡೋನೇಷ್ಯಾ, ಕಾಂಬೋಡಿಯಾ ಮತ್ತು ಹಲವಾರು ಆಫ್ರಿಕನ್ ದೇಶಗಳಿಗೆ ಖರಾತ್ ಭೇಟಿ ನೀಡಿದ್ದಾರೆ.

ಖರಾತ್, ಅವರ ಕುಟುಂಬ ಮತ್ತು ಸಹಚರರಿಗೆ ಸೇರಿರುವ ಹೆಚ್ಚಿನ ಆಸ್ತಿಗಳನ್ನು ಪತ್ತೆ ಹಚ್ಚಲು ಎಸ್ಐಟಿ, ಐಜಿಪಿ ಅವರಿಗೆ ಪತ್ರ ಬರೆದಿದೆ. ಈವರೆಗೆ ನಡೆದಿರುವ ತನಿಖೆಗಳ ಪ್ರಕಾರ, ಅವರ ಬಳಿ ಸಲಹೆ – ಸೇವೆಗಾಗಿ ಬಂದವರ ಬಳಿ ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಿದ್ದರು ಮತ್ತು ಇವರ ಬಳಿ ಬರುವವರಲ್ಲಿ ರಾಜಕಾರಣಿಗಳು ಮತ್ತು ಉನ್ನತ ಆಡಳಿತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.