ನವದೆಹಲಿ: ‘ಪಶ್ಚಿಮ ಏಷ್ಯಾ ಸಂಘರ್ಷವು ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಈ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನೌಕಾಪಡೆಗಾಗಿಯೇ ಪ್ರತ್ಯೇಕ ‘ಥಿಯೇಟರ್ ಕಮಾಂಡ್’ ಸ್ಥಾಪಿಸುವ ಅಗತ್ಯ ಇದೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಶನಿವಾರ ಹೇಳಿದ್ದಾರೆ.

ಸಾಗರ ಗಡಿಗಳ ಭದ್ರತೆಯು ಇಂಧನ ಹಾಗೂ ರಾಷ್ಟ್ರೀಯ ಸುರಕ್ಷತೆಯೊಂದಿಗೆ ನೇರ ನಂಟು ಹೊಂದಿದೆ ಎಂಬುದು ಪಶ್ಚಿಮ ಏಷ್ಯಾ ಯುದ್ಧದಿಂದ ಸಾಬೀತಾಗಿದೆ. ಹೀಗಾಗಿ, ಮೂರು ಸಶಸ್ತ್ರ ಪಡೆಗಳು ಹಾಗೂ ಕರಾವಳಿ ಪಡೆಗಳ ಶಸ್ತ್ರಾಸ್ತ್ರಗಳು ಹಾಗೂ ಸಿಬ್ಬಂದಿ ಒಳಗೊಂಡ ‘ನೌಕಾಪಡೆ ಥಿಯೇಟರ್ ಕಮಾಂಡ್’ ರಚಿಸುವುದರಿಂದ ನೌಕಾಪಡೆಯ ಯುದ್ಧ ಸಾಮರ್ಥ್ಯ ಹೆಚ್ಚಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಮಾತು ಹೇಳಿರುವ ಅವರು,‘ಥಿಯೇಟರ್ ಕಮಾಂಡ್ ರಚನೆಯಿಂದ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಾಗಬೇಕು. ಕೇವಲ ಸಂಘಟನಾತ್ಮಕವಾಗಿ ಪುನರ್ರಚನೆ ಆಗಬಾರದು ಎಂದು ತ್ರಿಪಾಠಿ ಹೇಳಿದ್ದಾರೆ.

ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಂದೇ ‘ಕಮಾಂಡ್’ ಅಡಿಯಲ್ಲಿ ತಂದು ಮಿಲಿಟರಿ ಕಾರ್ಯಾಚರಣೆಯನ್ನು ಸಂಯೋಜಿಸುವುದು ‘ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್’ ರಚನೆಯ ಗುರಿ.

‘ನೌಕಾಪಡೆಯು ತನ್ನ ಯುದ್ಧ ಸನ್ನದ್ಧತೆ ಹೆಚ್ಚಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆ(ಎ.ಐ), ಕ್ವಾಂಟಮ್ ಟೆಕ್ನಾಲಜಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಿದೆ’ ಎಂದು ಹೇಳಿದ್ದಾರೆ.

2–3 ವರ್ಷಗಳಲ್ಲಿ ‘ಥಿಯೇಟರ್ ಕಮಾಂಡ್’ಗಳು ಅಸ್ತಿತ್ವಕ್ಕೆ: ದ್ವಿವೇದಿ

ಬಹು ನಿರೀಕ್ಷಿತ ‘ಥಿಯೇಟರ್ ಕಮಾಂಡ್’ಗಳನ್ನು ಇನ್ನು 2–3 ವರ್ಷಗಳಲ್ಲಿ ರಚಿಸಲಾಗುವುದು ಎಂದು ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ಹೇಳಿದರು. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ(ಎನ್ಡಿಎ)ಯಲ್ಲಿ ನಡೆದ 150ನೇ ನಿರ್ಗಮನ ಪಥಸಂಚಲನ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಥಿಯೇಟರ್ ಕಮಾಂಡ್ಗಳ ರಚನೆ ಕಾರ್ಯ ನಡೆಯುತ್ತಿದೆ. ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು(ಸಿಡಿಎಸ್) ಈ ಕಾರ್ಯಕ್ಕೆ ವೇಗ ನೀಡುವ ವಿಶ್ವಾಸ ಇದೆ’ ಎಂದು ಹೇಳಿದರು. ಈ ಕುರಿತ ಸಮಗ್ರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಲ್ಲಿಸಲಾಗಿದ್ದು ವಿವಿಧ ಭಾಗೀದಾರರಿಂದ ವರದಿಯ ಪರಿಶೀಲನೆ ನಡೆಯುತ್ತಿದೆ ಎಂದರು. ಸಿಡಿಎಸ್ ಅನಿಲ್ ಚೌಹಾಣ್ ಅವರು ಶನಿವಾರ ನಿವೃತ್ತರಾಗಿದ್ದಾರೆ. ನೂತನ ಸಿಡಿಎಸ್ ಆಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಎನ್.ಎಸ್.ರಾಜಾ ಸುಬ್ರಮಣಿ ಅವರು ಭಾನುವಾರ ಅಧಿಕಾರ ವಹಿಸಿಕೊಳ್ಳುವರು.

ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಸೇನಾ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿರುವುದನ್ನು ನೌಕಾಪಡೆ ನಿಕಟವಾಗಿ ಗಮನಿಸುತ್ತಿದ್ದು ಎಲ್ಲ ಬಗೆಯ ಬೆದರಿಕೆಗಳಿಗೆ ಉತ್ತರ ಕೊಡಲು ಸನ್ನದ್ಧವಾಗಿದೆ.
-ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ, ನೌಕಾಪಡೆ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.