ಜಗದಲಪುರ (ಪಿಟಿಐ): ಭದ್ರತಾ ಪಡೆಗಳ ಧೈರ್ಯ, ಶೌರ್ಯ ಮತ್ತು ತ್ಯಾಗದ ಫಲವಾಗಿ ಮಾರ್ಚ್ 31ರ ಗಡುವಿಗೂ ಮುನ್ನವೇ ದೇಶವು ನಕ್ಸಲ್ ಮುಕ್ತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಕ್ಸಲ್ ಮುಕ್ತ ಅಭಿಯಾನದಲ್ಲಿ ಕೆಲವು ದಿನಾಂಕಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. 2023ರ ಡಿ.13ರಂದು ಛತ್ತೀಸಗಢದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆಯಾದಾಗ ನಕ್ಸಲ್ವಾದದ ನಿರ್ಮೂಲನೆಗೆ ಅಭಿಯಾನ ಆರಂಭಿಸಲಾಯಿತು’ ಎಂದರು.

2024ರ ಆಗಸ್ಟ್ 24ರಂದು ಎಲ್ಲಾ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಸಭೆ ಸೇರಿ 2026ರ ಮಾರ್ಚ್ 31ರ ಒಳಗಾಗಿ ದೇಶವನ್ನು ನಕ್ಸಲ್ ಮುಕ್ತ ಮಾಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು ಎಂದರು.

‘ಮಾರ್ಚ್ 31ರ ಗಡುವಿಗೂ ಮುನ್ನವೇ ಭದ್ರತಾ ಪಡೆಗಳ ಧೈರ್ಯ, ಶೌರ್ಯ, ತ್ಯಾಗದ ಪರಿಣಾವಾಗಿ ದೇಶದಲ್ಲಿ ನಕ್ಸಲ್ವಾದವು ಸಂಪೂರ್ಣವಾಗಿ ನಿರ್ನಾಮವಾಗಿದೆ’ ಎಂದರು.

ಬಿಜೆಪಿ ಅಧಿಕಾರದಲ್ಲಿ ಇಲ್ಲದ ಹಲವು ರಾಜ್ಯಗಳ ಸರ್ಕಾರಗಳು ನಕ್ಸಲ್ ಮುಕ್ತ ಭಾರತಕ್ಕಾಗಿ ಬೆಂಬಲ ನೀಡಿದ್ದವು ಎಂದು ಯಾವುದೇ ಹಿಂಜರಿಕೆ ಇಲ್ಲದೆ ಹೇಳುತ್ತೇನೆ. ಆದರೆ ಈ ಹಿಂದಿನ ಛತ್ತೀಸಗಢ ಸರ್ಕಾರ ಮಾತ್ರ ಬೆಂಬಲ ನೀಡಿರಲಿಲ್ಲ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-51-244539453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.