ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು(ಎನ್ಸಿಇಆರ್ಟಿ) ಪ್ರಕಟಿಸಿರುವ 8ನೇ ತರಗತಿಯ ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಅಧ್ಯಾಯದ ಕುರಿತು ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಎನ್ಸಿಇಆರ್ಟಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ಅಲ್ಲದೇ, ಪುಸ್ತಕ ಹಿಂದಕ್ಕೆ ಪಡೆಯುವುದಾಗಿ ತಿಳಿಸಿದೆ.

‘ಹೆಚ್ಚಿದ ಭ್ರಷ್ಟಾಚಾರ, ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಹಾಗೂ ನ್ಯಾಯಾಧೀಶರ ಕೊರತೆಯು ಭಾರತದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು’ ಎಂದು ಇದೇ ಅಧ್ಯಾಯದಲ್ಲಿ ತಿಳಿಸಲಾಗಿತ್ತು.

ಈ ಕುರಿತಂತೆ ಪ್ರಕಟಣೆ ಬಿಡುಗಡೆಗೊಳಿಸಿರುವ ಎನ್ಸಿಇಆರ್ಟಿ, ‘ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ‘ಸಮಾಜದಲ್ಲಿ ನ್ಯಾಯಾಂಗದ ಪಾತ್ರ’ ಅಧ್ಯಾಯದ ಕುರಿತಂತೆ ಸಂಸ್ಥೆಯ ನಿರ್ದೇಶಕರು ಹಾಗೂ ಸದಸ್ಯರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಇಡೀ ಪುಸ್ತಕವನ್ನೇ ಹಿಂದಕ್ಕೆ ಪಡೆಯಲಾಗಿದ್ದು, ಯಾರಿಗೂ ದೊರೆಯುವುದಿಲ್ಲ’ ಎಂದು ತಿಳಿಸಿದೆ.

‘ಪ್ರಶ್ನೆಪತ್ರಿಕೆ ಭದ್ರತೆಯಲ್ಲಿ ರಾಜಿಯಾಗಿಲ್ಲ’

‘ಪ್ರಶ್ನೆಪತ್ರಿಕೆಗಳ ನೈಜತೆ ಮತ್ತು ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ’ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಸ್ಪಷ್ಟಪಡಿಸಿದೆ.

ಮಾರ್ಚ್ 9ರಂದು ನಡೆದ ಸಿಬಿಎಸ್ಇ 12ನೇ ತರಗತಿ ಗಣಿತ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ‘ರಿಕ್ ರೋಲ್’ ಕ್ಯೂಆರ್ ಕೋಡ್ ಇದ್ದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ‘ನೆವರ್ ಗಿವ್ ಆಪ್’ ಹಾಡಿನ ವಿಡಿಯೊಗೆ ಸಂಪರ್ಕಆಗುತ್ತಿರುವುದು ಕಂಡುಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತವಾಗಿರುವ ನಡುವೆ ಸಿಬಿಎಸ್ಇ ಈ ಹೇಳಿಕೆ ನೀಡಿದೆ.

‘ಪ್ರಶ್ನೆ ಪತ್ರಿಕೆಯ ನೈಜತೆ ಪರಿಶೀಲನೆಗಾಗಿ ಕ್ಯೂಆರ್ ಕೋಡ್ ಸೇರಿದಂತೆ ಅನೇಕ ಭದ್ರತಾ ಅಂಶಗಳನ್ನು ಅಳವಡಿಸಲಾಗಿದೆ. ಕೆಲವು ಪ್ರಶ್ನೆಪತ್ರಿಕೆ ಗಳ ಸೆಟ್ನಲ್ಲಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಯೂಟ್ಯೂಬ್ ವಿಡಿಯೊಗೆ ಲಿಂಕ್ ಆಗಿರುವುದು ಕಂಡುಬಂದಿದೆ’ ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕರಾದ ಸಂಯಮ್ ಭಾರದ್ವಾಜ್ ಅವರು ಒಪ್ಪಿಕೊಂಡಿದ್ದಾರೆ.

[END BOX]

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.