ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಮತ್ತು ಅದರ ಆರು ಘಟಕಗಳಿಗೆ ಶಿಕ್ಷಣ ಸಚಿವಾಲಯವು ವಿಶಿಷ್ಟ ವರ್ಗದಡಿ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನವನ್ನು ನೀಡಿದೆ.

ಆ ಮೂಲಕ ಎನ್ಸಿಇಆರ್ಟಿ ಪಠ್ಯಕ್ರಮ ಮಂಡಳಿಯ ಅಧಿಕಾರವನ್ನು ವಿಸ್ತರಿಸಲಾಗಿದೆ ಮತ್ತು ಅದನ್ನು ಯುಜಿಸಿ ವ್ಯಾಪ್ತಿಗೆ ತರಲಾಗಿದೆ. ಜೊತೆಗೆ ಎನ್ಸಿಇಆರ್ಟಿ ತನ್ನದೇ ಆದ ಕೋರ್ಸ್ಗಳನ್ನು ವಿನ್ಯಾಸಗೊಳಿಸಲು, ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲು ಸಾಧ್ಯವಾಗುತ್ತದೆ.

ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸಲಹೆಯ ಮೇರೆಗೆ ಶಿಕ್ಷಣ ಸಚಿವಾಲಯವು ಈ ಸ್ಥಾನಮಾನ ನೀಡಿದೆ ಎಂದು ಗುರುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಆರು ಘಟಕಗಳಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳಾದ ಅಜ್ಮೀರ್, ಭೋಪಾಲ್, ಭುವನೇಶ್ವರ, ಮೈಸೂರು ಮತ್ತು ಶಿಲ್ಲಾಂಗ್ ಹಾಗೂ ಭೋಪಾಲ್ನ ಪಂಡಿತ್ ಸುಂದರ್ಲಾಲ್ ಶರ್ಮಾ ಇನ್ಸ್ಟಿಟ್ಯೂಟ್ ಆಫ್ ವೊಕೇಶನಲ್ ಎಜುಕೇಶನ್ ಸೇರಿವೆ.

ಮಾರ್ಚ್ 2023ರಲ್ಲಿ, ಎನ್ಸಿಇಆರ್ಟಿಗೆ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾನಮಾನ ನೀಡುವ ಯುಜಿಸಿಯ ಪ್ರಸ್ತಾವ ಕೇಂದ್ರವು ಅನುಮೋದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.