ನವದೆಹಲಿ: ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಲಾತೂರ್ ಮೂಲದ ವೈದ್ಯ (ಪೀಡಿಯಾಟ್ರಿಷಿಯನ್) ಹಾಗೂ ಭೌತಶಾಸ್ತ್ರ ಶಿಕ್ಷಕನನ್ನು ದೆಹಲಿ ನ್ಯಾಯಾಲಯವು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

ವಿಶೇಷ ನ್ಯಾಯಾಧೀಶರಾದ ವಿದ್ಯಾ ಪ್ರಕಾಶ್ ಅವರನ್ನೊಳಗೊಂಡ ಪೀಠವು ತನಿಖಾ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿ ಈ ಆದೇಶ ನೀಡಿದೆ. ಆರೋಪಿಗಳಾದ ಡಾ. ಮನೋಜ್ ಶಿರೂರೆ ಮತ್ತು ಭೌತಶಾಸ್ತ್ರ ಶಿಕ್ಷಕ ತೇಜಸ್ ಹರ್ಷದ್ಕುಮಾರ್ ಶಾ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಜೂನ್ 1ರವರೆಗೆ ಸಿಬಿಐ ಕಸ್ಟಡಿಗೆ ನೀಡಲಾಗಿದ್ದು, ಅಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದೆ.
.ಪ್ರಜಾವಾಣಿ ಪಾಡ್ಕಾಸ್ಟ್ | ಸಿಕ್ಸರ್ ವೈಭವವೋ..? ರನ್ಗಳ ಅಭಿಷೇಕವೋ..?.1-N-2-3-4-5: ಬೈಕ್ನ ಈ ಗಿಯರ್ ಪ್ಯಾಟರ್ನ್ ಹಿಂದಿರುವ ಸೀಕ್ರೆಟ್ ಗೊತ್ತಾ?.
ಮಹಾರಾಷ್ಟ್ರದ ಲಾತೂರ್ನಲ್ಲಿ 'ರೇಣುಕಾಯಿ ಕೆಮಿಸ್ಟ್ರಿ ಕ್ಲಾಸಸ್' ನಡೆಸುತ್ತಿರುವ ಶಿವರಾಜ್ ರಘುನಾಥ್ ಮೊಟೇಗಾಂವ್ಕರ್ ಅವರ ಮಗ ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದ ಪ್ರಶ್ನೆಗಳನ್ನು ಒದಗಿಸುವಲ್ಲಿ ಡಾ. ಮನೋಜ್ ಶಿರೂರೆ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿಬಿಐ ಆರೋಪಿಸಿದೆ. ಈ ಪ್ರಶ್ನೆಗಳನ್ನು ನೀಟ್ ಪೇಪರ್ ಸೆಟ್ಟರ್ ಪಿ.ವಿ. ಕುಲಕರ್ಣಿ ಅವರಿಂದ ಪಡೆಯಲಾಗಿತ್ತು ಎನ್ನಲಾಗಿದೆ. ಈ ಹಿಂದೆಯೇ ಮೊಟೇಗಾಂವ್ಕರ್ ಅವರನ್ನು ಬಂಧಿಸಲಾಗಿದೆ.

ಪುಣೆ ಮೂಲದ 'ಡಾ. ಅಭಂಗ್ ಪ್ರಭು ಮೆಡಿಕಲ್ ಅಕಾಡೆಮಿ' ಕೋಚಿಂಗ್ ಸೆಂಟರ್ನ ಭೌತಶಾಸ್ತ್ರ ಶಿಕ್ಷಕ ತೇಜಸ್ ಹರ್ಷದ್ಕುಮಾರ್ ಶಾ, ಈ ಹಿಂದೆ ಬಂಧಿತಳಾಗಿದ್ದ ಮನೀಷಾ ಹವಾಲ್ದಾರ್ ಎಂಬಾಕೆಯಿಂದ 2026ರ ನೀಟ್ ಪರೀಕ್ಷೆಯ ಭೌತಶಾಸ್ತ್ರದ ಪ್ರಶ್ನೆಗಳನ್ನು ಪಡೆದುಕೊಂಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ.
.ರಾಜೀನಾಮೆ ವದಂತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು?.ಸಿಎಂ ಸ್ಥಾನಕ್ಕೆ ರಾಜೀನಾಮೆ ವದಂತಿ: ಸಿದ್ದರಾಮಯ್ಯ ನಿವಾಸದ ಮುಂದೆ ಜನಜಾತ್ರೆ.
ಈ ಇಬ್ಬರ ಬಂಧನದೊಂದಿಗೆ ನೀಟ್ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲ್ಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಅಕ್ರಮ ಮತ್ತು ಪತ್ರಿಕೆ ಸೋರಿಕೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮೇ 12ರಂದು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಸದ್ಯ ಜೂನ್ 21ಕ್ಕೆ ಮರುಪರೀಕ್ಷೆ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.