ನವದೆಹಲಿ: ನೀಟ್–ಯುಜಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆಯಾಗಿದೆ. ಅಭ್ಯರ್ಥಿಗಳು ಇದೇ ಮಾರ್ಚ್ 11ರವರೆಗೆ ಅರ್ಜಿ ಸಲ್ಲಿಸಬಹುದು.

ಈ ಮೊದಲು ಮಾರ್ಚ್ 8 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿತ್ತು.

ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸಲು ಮಾರ್ಚ್ 11ರ ರಾತ್ರಿ 11.50ವರೆಗೆ ಸಮಯ ಇರಲಿದೆ ಎಂದು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (ಎನ್ಟಿಎ) ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.

ಕಳೆದ ಫೆಬ್ರುವರಿ 8 ರಂದು ಅರ್ಜಿ ಸಲ್ಲಿಕೆ ಆರಂಭವಾಗಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳನ್ನು ಅಭ್ಯರ್ಥಿಗಳು ರಿಪೋರ್ಟ್ ಮಾಡಿದ್ದರಿಂದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆಯಾಗಿದೆ ಎಂದು ಎನ್ಟಿಎ ತಿಳಿಸಿದೆ.

ಮೇ 3 ರಂದು ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಇದು ಸಿಬಿಟಿ ಬದಲು ಪೆನ್ ಆ್ಯಂಡ್ ಪೇಪರ್ ರೂಪದಲ್ಲಿ ಇರಲಿದೆ. ಎಂಬಿಬಿಎಸ್, ಬಿಡಿಎಸ್ ಹಾಗೂ ಇತರ ಆಯುಷ್ ಕೋರ್ಸ್ಗಳಿಗೆ ದೇಶದಾದ್ಯಂತ ಒಂದೇ ನೀಟ್ ಯುಜಿ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.