ಕಠ್ಮಂಡು (ಪಿಟಿಐ): ದೇಶೀಯ ಸರಕು ಸಾಗಣೆ ವ್ಯವಹಾರದಲ್ಲಿ ಅನಾರೋಗ್ಯಕರ ಸ್ಪರ್ಧೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನೇಪಾಳ ಟ್ರಕ್ ಚಾಲಕರು, ಭಾರತೀಯ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಬೇಕು ಎಂದು ಸೋಮವಾರ ಒತ್ತಾಯಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಟ್ರಕ್ ಸಾರಿಗೆ ಉದ್ಯಮಿಗಳ ಒಕ್ಕೂಟದ (ಎಫ್‌ಟಿಟಿಇಎನ್) ಪ್ರಧಾನ ಕಾರ್ಯದರ್ಶಿ ರಾಜೇಂದ್ರ ವಿಕ್ರಮ್ ಬನಿಯಾ ಅವರು, ‘ಭಾರತೀಯ ಟ್ರಕ್‌ಗಳು ಉಚಿತ ಪ್ರವೇಶ ಪಡೆಯುತ್ತಿವೆ. ಆದರೆ ಭಾರತದಲ್ಲಿ ನಮ್ಮ ದೇಶದ ಟ್ರಕ್‌ಗಳು ಹಲವು ಸವಾಲುಗಳನ್ನು ಎದುರಿಸುತ್ತಿವೆ’ ಎಂದು ಹೇಳಿದರು. ಯಾವ ರೀತಿಯ ಸವಾಲು ಎದುರಿಸುತ್ತಿವೆ ಎಂಬ ಬಗ್ಗೆ ಅವರು ವಿವರಣೆ ನೀಡಲಿಲ್ಲ.
ರಾಜಧಾನಿ ಕಠ್ಮಂಡು ಸೇರಿದಂತೆ ಹಲವೆಡೆ ಟ್ರಕ್ ಪಾರ್ಕಿಂಗ್ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದೂ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.