ಪ್ರಧಾನಿ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ನೂತನ ಸಂಸತ್ ಭವನದ ಉದ್ಘಾಟನೆಗೆ ಪೂಜೆ ಆರಂಭಿಸಿದರು. ಸುಮಾರು ಒಂದು ಗಂಟೆ ಕಾಲ ಪೂಜೆ ಕಾರ್ಯಕ್ರಮ ನಡೆಯಲಿದೆ. ಪೂಜೆಯ ನಂತರ ಪ್ರಧಾನ ಮಂತ್ರಿಯವರು 'ಸೆಂಗೊಲ್' ಅನ್ನು ಸ್ವೀಕರಿಸಲಿದ್ದಾರೆ. ಅದನ್ನು ಹೊಸ ಸಂಸತ್ತಿನಲ್ಲಿ ಸ್ಥಾಪಿಸಲಿದ್ದಾರೆ.
ಸೆಂಗೋಲ್ ಎಂದರೇನು?
‘ಸೆಂಗೋಲ್’ ಎಂಬುದು ತಮಿಳು ಪದ ‘ಸೆಮ್ಮೈ’ಯಿಂದ ಬಂದಿದ್ದು, ‘ನ್ಯಾಯಪರತೆ’ ಅಥವಾ ‘ಧರ್ಮನಿಷ್ಠತೆ’ ಎಂದರ್ಥ
ಇದು ಅಧಿಕಾರ ಹಸ್ತಾಂತರವನ್ನು ಸೂಚಿಸುತ್ತದೆ
ಇದು ಐದು ಅಡ್ಡಿ ಎತ್ತರವಿದ್ದು, ತುದಿಯಲ್ಲಿ ಚಿಕ್ಕ ನಂದಿ ವಿಗ್ರಹ ಇದೆ
ವಿವಿಧ ಆಭರಣಗಳಿಂದ ಅಲಂಕೃತ
ಚೆನ್ನೈನ ವುಮ್ಮಿಡಿ ಬಂಗಾರು ಚೆಟ್ಟಿ ಮತ್ತು ಮಕ್ಕಳು ತಯಾರಿಸಿದ್ದಾರೆ
ತಂಜಾವೂರಿನ ತಿರುವಾವದುತ್ತುರೈ ಅಧೀನಮ್‌ನ ಪ್ರಧಾನ ಅರ್ಚಕ ಅಂಬಲವನ ದೇಶಿಕಸ್ವಾಮಿಗಳು ಇದಕ್ಕೆ ಅನುಮೋದನೆ ನೀಡಿದ್ದರು
1947ರ ಆಗಸ್ಟ್‌ನಲ್ಲಿ ಇದರ ಬೆಲೆ ₹ 15,000 ಇತ್ತು
ವಿಶೇಷ ವಿಮಾನದಲ್ಲಿ ದೆಹಲಿಗೆ ತರಲಾಗಿದ್ದ ಈ ಸೆಂಗೋಲ್ ಅನ್ನು ತಿರುವಾವದುತ್ತುರೈ ಅಧೀನಮ್‌ನ ಕುಮಾರಸ್ವಾಮಿ ತಂಬಿರನ್ ಅವರು ಜವಾಹರಲಾಲ್ ನೆಹರೂ ಅವರಿಗೆ ನೀಡಿದ್ದರು
ಲೋಕಸಭಾ ಸ್ಪೀಕರ್ ಅವರ ಪೀಠದ ಸಮೀಪ ಈ ‘ಸೆಂಗೋಲ್’ ಅನ್ನು ಪ್ರತಿಷ್ಠಾಪಿಸಲಾಗುತ್ತದೆ
ನೂತನ ಸಂಸತ್ ಭವನದಲ್ಲಿ ನಡೆಯುತ್ತಿರುವ ಸರ್ವ ಧರ್ಮದ ಪ್ರಾರ್ಥನಾ ಸಭೆಯಲ್ಲಿ ಪ್ರಧಾನಿ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಸಿಎಂಗಳು ಭಾಗವಹಿಸಿದ್ದಾರೆ.
ಭಾರತ ಪ್ರಜಾಪ್ರಭುತ್ವದ ತಾಯಿ. ಇದು ಜಾಗತಿಕ ಪ್ರಜಾಪ್ರಭುತ್ವದ ಅಡಿಪಾಯವೂ ಹೌದು. ಪ್ರಜಾಪ್ರಭುತ್ವವು ನಮ್ಮ 'ಸಂಸ್ಕಾರ', ಕಲ್ಪನೆ ಮತ್ತು ಸಂಪ್ರದಾಯ. ಭಾರತದ ಜತೆಗೆ ನೂತನ ಸಂಸತ್ ಭವನವೂ ವಿಶ್ವದ ಪ್ರಗತಿಗೆ ಕೊಡುಗೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.