ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ವಿರೋಧಿ ಸಿದ್ದಾಂತ ಪ್ರಚಾರ: ತಮಿಳುನಾಡಿನ 11 ಸ್ಥಳಗಳಲ್ಲಿ ಎನ್‌ಐಎ ದಾಳಿ

Published : 24 ಸೆಪ್ಟೆಂಬರ್ 2024, 15:42 IST
Last Updated : 24 ಸೆಪ್ಟೆಂಬರ್ 2024, 15:42 IST
ಫಾಲೋ ಮಾಡಿ
Comments

ನವದೆಹಲಿ: ರಾಷ್ಟ್ರವ್ಯಾಪಿ ಇಸ್ಲಾಮಿಕ್‌ ಆಡಳಿತವನ್ನು ಜಾರಿಗೆ ತರುವ ಉದ್ದೇಶ ಹೊಂದಿರುವ ‘ಹಿಜ್ಬ್‌–ಉಟ್‌– ತಹ್ರೀರ್‌’ ಸಂಘಟನೆ ನಡೆಸುತ್ತಿದ್ದ ‘ಚುನಾವಣಾ ವಿರೋಧಿ ಅಭಿಯಾನ’ದ ಬೆನ್ನಲ್ಲೇ, ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ತಮಿಳುನಾಡಿನ ವಿವಿಧೆಡೆ ಏಕಕಾಲಕ್ಕೆ 11 ಸ್ಥಳಗಳಲ್ಲಿ ದಾಳಿ ನಡೆಸಿದೆ.

‘ಚೆನ್ನೈನ ತಂಬ್ರಾಮ್‌, ಕನ್ಯಾಕುಮಾರಿ ಜಿಲ್ಲೆಯ 11 ಮನೆಗಳ ಮೇಲೆ ದಾಳಿ ನಡೆಸಿದ್ದು, ಡಿಜಿಟ‌ಲ್‌ ಉಪಕರಣಗಳು, ನಗದು, ಸಂಘಟನೆಗೆ ಸೇರಿದ ಸಾಹಿತ್ಯಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

ಚುನಾವಣಾ ಪ್ರಕ್ರಿಯೆ ಕುರಿತಂತೆ ಸಂಘಟನೆಗೆ ಸೇರಿದ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಅಪಪ್ರಚಾರ ಮಾಡುತ್ತಿದ್ದ ಬೆನ್ನಲ್ಲೇ, ಎನ್‌ಐಎ ಈ ದಾಳಿ ನಡೆಸಿದೆ. ಸಂಘಟನೆಯ ಪ್ರಕಾರ, ಚುನಾವಣೆಯೂ ಇಸ್ಲಾಮಿಕ್‌ ವಿರೋಧಿಯಾಗಿದ್ದು, ‘ಹರಾಂ’ ಎಂದು ಪರಿಗಣಿಸುತ್ತಿತ್ತು. 

‘ಹಿಜ್ಬ್‌–ಉಟ್‌– ತಹ್ರೀರ್‌’ ಮೂಲಭೂತ ಸಂಘಟನೆಯಾಗಿದ್ದು, ತನ್ನ ಸದಸ್ಯರ ಮೂಲಕ ಚುನಾಯಿತ ಸರ್ಕಾರವನ್ನು ಪ‌ತನಗೊಳಿಸಲು ಪ್ರಚೋದನೆ ನೀಡುತ್ತಿತ್ತು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಹಮೀದ್‌ ಹುಸೈನ್‌ ಪ್ರಮುಖ ಸಂಚುಕೋರನಾಗಿದ್ದು, ಉಳಿದ ಐದು ಮಂದಿ ಸದಸ್ಯರು ಗುಪ್ತ ಸಭೆಗಳನ್ನು ನಡೆಸುವ ಮೂಲಕ ಭಾರತ ವಿರೋಧಿ ಅಭಿಯಾನಕ್ಕೆ ಕೈಜೋಡಿಸುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದರು.

ಚೆನ್ನೈ ಪೊಲೀಸರು ನಡೆಸುತ್ತಿದ್ದ ತನಿಖೆಯನ್ನು ಈ ವರ್ಷದ ಜುಲೈ ತಿಂಗಳಲ್ಲಿ ಎನ್‌ಐಎ ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ಸಂಘಟನೆಗೆ ಸೇರಿದ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT