ಸೋಲಾಪುರ: ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಮೇ 14 ರಂದು ಸೋಲಾಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ರಸ್ತೆ ಪರಿಶೀಲನೆ, ದೇವರದರ್ಶನ ಹಾಗೂ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಭೂಮಿಪೂಜೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಪುಣೆಯಿಂದ ಆರಂಭವಾಗುವ ಪ್ರವಾಸದಲ್ಲಿ ಅವರು ದಿವೆ ಘಾಟ್ ರಸ್ತೆ ಪರಿಶೀಲನೆಯ ನಂತರ ಪಂಢರಪುರ ಹಾಗೂ ಅಕ್ಕಲಕೋಟೆಗೆ ಭೇಟಿ ನೀಡಿ ದೇವರದರ್ಶನ ಮಾಡಲಿದ್ದಾರೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಭೂಮಿಪೂಜೆ ಕಾರ್ಯಕ್ರಮವನ್ನೂ ನೆರವೇರಿಸಲಿದ್ದಾರೆ.

ಗುರುವಾರ ಮಧ್ಯಾಹ್ನ ಸುಮಾರು 1.45 ಗಂಟೆಗೆ ಪಂಢರಪುರ ತಲುಪುವ ಅವರು ವಿಠ್ಠಲ-ರುಕ್ಮಿಣಿ ದೇವಾಲಯದಲ್ಲಿ ದರ್ಶನ ಪಡೆಯಲಿದ್ದಾರೆ. ನಂತರ ಮಾಜಿ ಶಾಸಕ ಪ್ರಶಾಂತ ಪರಿಚಾರಕ ಅವರ ನಿವಾಸದಲ್ಲಿ ಮಧ್ಯಾಹ್ನದ ಊಟ, ಸಂಜೆ ಸುಮಾರು 4.45ಕ್ಕೆ ಸಚಿವ ಗಡ್ಕರಿ ಪಂಢರಪುರದಿಂದ ಹೆಲಿಕಾಪ್ಟರ್ ಮೂಲಕ ಅಕ್ಕಲಕೋಟೆಗೆ ತೆರಳಲಿದ್ದಾರೆ. ಸಂಜೆ 5.10 ಗಂಟೆಗೆ ಅಕ್ಕಲಕೋಟೆ ತಲುಪಿದ ಬಳಿಕ ಅವರು ವಟವೃಕ್ಷ ಸ್ವಾಮಿ ಸಮರ್ಥ ದೇವಾಲಯದಲ್ಲಿ ದರ್ಶನ ಪಡೆಯಲಿದ್ದಾರೆ. ಬಳಿಕ ಶಿವಪುರಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಸಂಜೆ 6 ಗಂಟೆಗೆ ಶಾಸಕ ಸಚಿನ ಕಲ್ಯಾಣಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

ಸಂಜೆ 6.30ಕ್ಕೆ ಸಚಿವ ಗಡ್ಕರಿ ಅವರು ಅಕ್ಕಲಕೋಟೆ ಬಸ್ ನಿಲ್ದಾಣದ ಸಮೀಪ ಸೋಲಾಪುರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಭೂಮಿಪೂಜೆ ನೆರವೇರಿಸಲಿದ್ದಾರೆ. ನಂತರ ಅವರು ರಸ್ತೆ ಮಾರ್ಗವಾಗಿ ಸೋಲಾಪುರ ನಗರಕ್ಕೆ ಆಗಮಿಸಲಿದ್ದು, ರಾತ್ರಿ ಸೋಲಾಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-26-1809716891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.