ನವದೆಹಲಿ: ಹೊರ್ಮುಜ್ ಜಲಸಂಧಿಯ ಮೂಲಕ ವ್ಯಾಪಾರಿ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಅಮೆರಿಕದ ಜೊತೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸಿಲ್ಲ ಎಂದು ಭಾರತ ಸೋಮವಾರ ಹೇಳಿದೆ.

ಆಯಕಟ್ಟಿನ ಪ್ರಮುಖ ಜಲಸಾರಿಗೆಯ ಮಾರ್ಗವನ್ನು ಮುಕ್ತವಾಗಿಡಲು ಯುದ್ಧನೌಕೆಗಳನ್ನು ಕಳಿಸಿಕೊಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ದೇಶಗಳಿಗೆ ಮನವಿ ಮಾಡಿಕೊಂಡ ಬೆನ್ನಿಗೆ, ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ.

‘ಈ ವಿಷಯವನ್ನು ಹಲವು ದೇಶಗಳು ಚರ್ಚಿಸುತ್ತಿವೆ. ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ನಾವು ಇನ್ನೂ ಚರ್ಚಿಸಿಲ್ಲ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳು ಸುರಕ್ಷಿತವಾಗಿ ಸಂಚರಿಸಲು ಇರಾನ್ನೊಂದಿಗೆ ಮಾತುಕತೆ ನಡೆದಿದೆ.
– ಜೈಶಂಕರ್, ವಿದೇಶಾಂಗ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.