ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ತರಗತಿ ವರೆಗೆ ಪರೀಕ್ಷೆ ಬೇಡ, ಮೌಲ್ಯಮಾಪನ ಮಕ್ಕಳಿಗೆ ಹೊರೆಯಾಗದಿರಲಿ: NCF

Last Updated 7 ಏಪ್ರಿಲ್ 2023, 13:21 IST
ಅಕ್ಷರ ಗಾತ್ರ

ನವದೆಹಲಿ: 2ನೇ ತರಗತಿ ವರೆಗಿನ ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡಲು ಪರೀಕ್ಷೆಗಳನ್ನು ನಡೆಸುವುದು ಸಂಪೂರ್ಣವಾಗಿ ಅಸಮಂಜಸ ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ (ಎನ್‌ಸಿಎಫ್‌) ಕರಡಿನಲ್ಲಿ ಶಿಫಾರಸು ಮಾಡಲಾಗಿದೆ. ಮೌಲ್ಯಮಾಪನ ವಿಧಾನಗಳು ಮಕ್ಕಳಿಗೆ ಹೆಚ್ಚಿನ ಹೊರೆಯಾಗುವಂತಿರಬಾರದು ಎಂದೂ ಹೇಳಲಾಗಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ಸಿದ್ಧಪಡಿಸಲಾಗಿರುವ ಎನ್‌ಸಿಎಫ್‌ ಕರಡಿನಲ್ಲಿ, ಎರಡು ಪ್ರಮುಖ ಮೌಲ್ಯಮಾಪನ ವಿಧಾನಗಳನ್ನು ಸೂಚಿಸಲಾಗಿದೆ. ಮಗುವಿನ ಕಲಿಕಾ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ನಡೆಸಬೇಕು ಹಾಗೂ ಕಲಿಕೆ ಸಂದರ್ಭದಲ್ಲಿ ಮಗುವು ರಚಿಸುವ ಕಲಾಕೃತಿಗಳನ್ನು ವಿಶ್ಲೇಷಣೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.

'ವಿದ್ಯಾರ್ಥಿಗಳು ಮತ್ತು ಅವರ ಕಲಿಕೆಯಲ್ಲಿನ ವೈವಿಧ್ಯತೆಗೆ ಮೌಲ್ಯಮಾಪನಗಳು ಅನುವು ಮಾಡಿಕೊಡಬೇಕು. ಮಕ್ಕಳು ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ಅವುಗಳನ್ನು ಅವರು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ. ಮಕ್ಕಳ ಕಲಿಕಾ ಸಾಧನೆ ಮತ್ತು ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಹಲವು ಮಾರ್ಗಗಳಿರಬೇಕು. ವಿವಿಧ ರೀತಿಯ ಮೌಲ್ಯಮಾಪನ ವಿಧಾನಗಳನ್ನು ರೂಪಿಸುವ ಹಾಗೂ ಅವುಗಳನ್ನು ಸೂಕ್ತವಾಗಿ ಬಳಸುವ ಸಾಮರ್ಥ್ಯ ಶಿಕ್ಷಕರಲ್ಲಿಯೂ ಇರಬೇಕು' ಎಂದು ಹೇಳಿದೆ.

'ಮೌಲ್ಯಮಾಪನಗಳ ರೆಕಾರ್ಡಿಂಗ್‌ ಮತ್ತು ದಾಖಲಾತಿಯಾಗಬೇಕು. ವ್ಯವಸ್ಥಿತ ಸಾಕ್ಷ್ಯಗಳ ಮೂಲಕ ಮಕ್ಕಳ ಪ್ರಗತಿಯ ವಿವರಣೆ ಮತ್ತು ವಿಶ್ಲೇಷಣೆಯಾಗಬೇಕು. ಮಕ್ಕಳ ಸ್ವಾಭಾವಿಕ ಕಲಿಕೆಯ ಅನುಭವವನ್ನು ವಿಸ್ತರಿಸುವಂತೆ ಮೌಲ್ಯಮಾಪನ ಸಾಧನ ಮತ್ತು ಪ್ರಕ್ರಿಯೆಯನ್ನು ವಿನ್ಯಾಸಗೊಳಿಸಬೇಕು' ಎಂದು ತಿಳಿಸಲಾಗಿದೆ.

ಲಿಖಿತ ಪರೀಕ್ಷೆಗಳನ್ನು 3ನೇ ತರಗತಿ ನಂತರ ಪರಿಚಯಿಸಬೇಕು ಎಂದೂ ಕರಡು ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT