ನವದೆಹಲಿ: ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಬೆನ್ನಲ್ಲೇ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಪ್ರವೇಶಕ್ಕೆ ಒಟ್ಟಿಗೆ ಪರೀಕ್ಷೆ ನಡೆಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಹಾಗೆಯೇ, ಪ್ರಶ್ನೆಪತ್ರಿಕೆಗಳನ್ನು ತಯಾರಿಸಲು ಹೊರಗಿನ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವ ಕುರಿತಾಗಿಯೂ ಪರಿಶೀಲನೆ ನಡೆಸುತ್ತಿದೆ.

ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಕಾಂಗ್ರೆಸ್ ಸಂಸದ ದಿಗ್ವಜಯ್ ಸಿಂಗ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ಎದುರು ಈ ಪ್ರಸ್ತಾವಗಳನ್ನು ಇಟ್ಟಿದ್ದಾರೆ. ಸಭೆ ವೇಳೆ, ಸದ್ಯಕ್ಕೆ ನೀಟ್–ಯುಜಿ ಪ್ರಶ್ನೆಪತ್ರಿಕೆ ‘ಸೋರಿಕೆ’ ಎಂಬುದನ್ನು ಒಪ್ಪಲಾಗದು. ಸಿಬಿಐ ತನಿಖೆ ನಂತರವಷ್ಟೇ ಹಾಗೆ ಕರೆಯಬಹುದು ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ (ಎನ್ಟಿಎ) ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಸಮಿತಿಯಲ್ಲಿರುವ ಬಿಜೆಪಿಯ ಕೆಲವು ಸಚಿವರು ಅಧಿಕಾರಿಗಳ ವಾದವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

2026ರ ನೀಟ್–ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ತನಿಖೆಯ ಪ್ರಗತಿ ಪರಿಶೀಲನೆ ಮತ್ತು ಎನ್ಟಿಎ ಸುಧಾರಣೆ ಸಂಬಂಧ ಕೆ.ರಾಧಾಕೃಷ್ಣ ಸಮಿತಿಯ ಶಿಫಾರಸುಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಪರಾಮರ್ಶೆ ನಡೆಸುವ ಸಂಬಂಧ ದಿಗ್ವಿಜಯ ಸಿಂಗ್ ಅವರು ಗುರುವಾರ ಸಭೆ ಕರೆದಿದ್ದರು.

‘22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅಪಾಯದಲ್ಲಿದೆ. ಪ್ರಶ್ನೆ ಪತ್ರಿಕೆಗಳ ಸೋರಿಕೆ ಹೇಗಾಯಿತು? ಅದನ್ನು ತಡೆಯಲು ಏನೆಲ್ಲ ಮಾಡಬಹುದಾಗಿತ್ತು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು’ ಎಂದು ಸಭೆಗೂ ಮುನ್ನ ಸಿಂಗ್ ಹೇಳಿದ್ದರು.

ಇಂತಹ ಪ್ರಕರಣಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು, ತೀರಾ ಅಗತ್ಯವಿರುವವರಿಗಷ್ಟೇ ಪ್ರಶ್ನೆಪತ್ರಿಕೆ ತಯಾರಿಕೆ ಮಂಡಳಿಗೆ ಅವಕಾಶ ಕಲ್ಪಿಸುವುದು. ಕ್ರಮೇಣ ಬಾಹ್ಯ ಪರೀಕ್ಷಾ ಸಂಸ್ಥೆಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ಕುರಿತು ಸಭೆಯಲ್ಲಿ ಎನ್ಟಿಎ ಪ್ರಸ್ತಾಪಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ – 2020 ಅಡಿಯಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶಕ್ಕೆ ಒಟ್ಟಿಗೆ ಪರೀಕ್ಷೆ ನಡೆಸುವ ಪ್ರಸ್ತಾವನೆಯನ್ನೂ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಶಿಕ್ಷಣ ಸಚಿವಾಲಯದ ಉತ್ತನ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ಹಾಗೂ ಎನ್ಟಿಎ ಅಧ್ಯಕ್ಷ ಅಭಿಷೇಕ್ ಸಿಂಗ್ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸ್ಥಾಯಿ ಸಮಿತಿಯ ಎದುರು ಬುಧವಾರವೂ ಹೇಳಿಕೆ ನೀಡಿದ್ದರು.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಸಿಬಿಐ ಈವರೆಗೆ 10 ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.