ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ಆಮಿಷವೊಡ್ಡಿ ವಂಚನೆ: ಒಡಿಶಾ ಶಾಸಕ ಸೇರಿ ಮೂವರ ವಿರುದ್ಧ ದೋಷಾರೋಪ

Published 22 ಆಗಸ್ಟ್ 2023, 11:37 IST
Last Updated 22 ಆಗಸ್ಟ್ 2023, 11:37 IST
ಅಕ್ಷರ ಗಾತ್ರ

ಭುವನೇಶ್ವರ: ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿರುವ ಪ್ರಕರಣದಲ್ಲಿ ಒಡಿಶಾ ಶಾಸಕ ಪ್ರದೀಪ್‌ ಪಾಣಿಗ್ರಾಹಿ ಹಾಗೂ ಇತರ ಇಬ್ಬರ ವಿರುದ್ಧ ಇಲ್ಲಿನ ಜ್ಯುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಪ್ರಥಮ ದರ್ಜೆ ನ್ಯಾಯಾಲಯವು ದೋಷಾರೋಪ ನಿಗದಿ ಮಾಡಿದೆ.

ವಜಾಗೊಂಡಿರುವ ಐಎಫ್‌ಎಸ್‌ ಅಧಿಕಾರಿ ಅಭಯ್‌ ಕಾಂತ್‌ ಪಾಠಕ್‌ ಅವರ ಪುತ್ರ ಆಕಾಶ್‌ ಪಾಠಕ್‌ ಮತ್ತು ವಿ. ಸರ್ವೇಶ್ವರ ರಾವ್‌ ಇತರ ಇಬ್ಬರು ಆರೋಪಿಗಳಾಗಿದ್ದಾರೆ.

ಒಡಿಶಾದ ಗಂಜಾಂ ಜಿಲ್ಲೆಯ ಹಲವರಿಗೆ ಆಟೊಮೊಬೈಲ್‌ ಕಂಪನಿಯೊಂದರಲ್ಲಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿ ವಂಚಿಸಿರುವ ಆರೋಪದಲ್ಲಿ ಗೋಪಾಲ್‌ಪುರ ಶಾಸಕರಾಗಿರುವ ಪ್ರದೀಪ್‌ ಅವರನ್ನು 2020 ಡಿಸೆಂಬರ್ 3ರಂದು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಆಡಳಿತಾರೂಢ ಬಿಜೆಡಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. 

ಆರೋಪಿ ಆಕಾಶ್‌ ಪರವಾಗಿ ಪ್ರದೀಪ್‌ ಅವರು ಹಣ ಪಡೆದಿದ್ದರು ಎಂದು ಕ್ರೈಂ ಬ್ರಾಂಚ್‌ ಪೊಲೀಸರು ಆರೋಪಿಸಿದ್ದರು.

ಟಾಟಾ ಮೋಟರ್ಸ್‌ನವರ ಲಾಂಛನವನ್ನು ಬಳಸಿ ಉದ್ಯೋಗದ ಆಮಿಷವೊಡ್ಡಿ, ಆಕಾಶ್‌ ಜನರಿಂದ ಹಣ ಪಡೆದಿದ್ದ ಎಂದೂ ಆರೋಪಿಸಲಾಗಿತ್ತು.

ಟಾಟಾ ಮೋಟರ್ಸ್‌ನವರು ನೀಡಿದ್ದ ದೂರಿನ ಆಧಾರದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. 2022 ಫೆಬ್ರುವರಿ 10ರಂದು ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ಆರೋಪಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT