ಭುವನೇಶ್ವರ: ಉದ್ಯೋಗ ಹುಡುಕಿಕೊಂಡು ರಷ್ಯಾದ ಮಾಸ್ಕೊಗೆ ತೆರಳಿದ್ದ ಒಡಿಶಾದ ಗಂಜಾಂ ಮೂಲದ ವ್ಯಕ್ತಿಯೊಬ್ಬರು ಉಕ್ರೇನ್, ಭಾನುವಾರ(ಮೇ 17) ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತನನ್ನು ರಾಮಯ್ಯ ಎಂದು ಗುರುತಿಸಲಾಗಿದ್ದು, ಉದ್ಯೋಗಕ್ಕಾಗಿ ಕಳೆದ ತಿಂಗಳಷ್ಟೇ ಅವರು ರಷ್ಯಾಗೆ ತೆರಳಿದ್ದರು. ಈ ಕುರಿತು ರಾಮಯ್ಯ ಕುಟುಂಬಕ್ಕೆ ಅವರ ಸ್ನೇಹಿತರು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದೀಗ ಮೃತದೇಹವನ್ನು ಭಾರತಕ್ಕೆ ತರುವ ಉದ್ದೇಶದಿಂದ ಮೃತನ ಕುಟುಂಬಸ್ಥರು ಗಂಜಾಂ ಜಿಲ್ಲಾಧಿಕಾರಿ ಕೀರ್ತಿ ವಾಸನ್ ಅವರಿಗೆ ಮನವಿ ಮಾಡಿದ್ದಾರೆ.

ಮಾಸ್ಕೊದಲ್ಲಿ ರಾಮಯ್ಯ ಅವರ ಅಕಾಲಿಕ ಮರಣದ ಬಗ್ಗೆ ನಮಗೆ ಮಾಹಿತಿ ಬಂದಿದೆ. ನಾವು ದೆಹಲಿಯಲ್ಲಿರುವ ಸ್ಥಾನಿಕ ಆಯುಕ್ತ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಅವರ ಮೃತದೇಹವನ್ನು ಒಡಿಶಾಗೆ ತರಲು ಶಿಷ್ಟಾಚಾರದ ಪ್ರಕಾರ ಸ್ಥಾನಿಕ ಆಯುಕ್ತವು ರಾಜತಾಂತ್ರಿಕ ಮಾರ್ಗಗಳ ಮೂಲಕ ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸುತ್ತಿದೆ. ಸಾಧ್ಯವಾದಷ್ಟು ಬೇಗ ಮೃತದೇಹವನ್ನು ತರಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕೀರ್ತಿ ವಾಸನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.