ನವದೆಹಲಿ: ಇರಾನ್ನ ಕಚ್ಚಾ ತೈಲವನ್ನು ತುಂಬಿಕೊಂಡು ಭಾರತಕ್ಕೆ ಬರುತ್ತಿದ್ದ ಅಮೆರಿಕ ಅನುಮೋದಿತ ತೈಲ ಟ್ಯಾಂಕರ್, ಹಣ ಪಾವತಿಯಲ್ಲಿನ ವ್ಯತ್ಯಯದ ಕಾರಣಕ್ಕೆ ಚೀನಾದ ಕಡೆಗೆ ತೆರಳಿದೆ.

6 ಲಕ್ಷ ಬ್ಯಾರಲ್ ಕಚ್ಚಾ ತೈಲವಿದ್ದ ಪಿಂಗ್ ಶುನ್ ಟ್ಯಾಂಕರ್ ಖಾರ್ಗ್ ದ್ವೀಪದಿಂದ ಮಾರ್ಚ್ 4ರಂದು ಹೊರಟಿತ್ತು. ಏಪ್ರಿಲ್ 4ರಂದು ಗುಜರಾತ್ನ ವಾಡಿನಾರ್ ಬಂದರಿಗೆ ಬರಬೇಕಾಗಿತ್ತು.

‘ಆದರೆ ಇದೀಗ ಆ ಟ್ಯಾಂಕರ್ ಚೀನಾದ ಕಡೆಗೆ ಪ್ರಯಾಣಿಸುತ್ತಿದೆ’ ಎಂದು ನೌಕೆಗಳ ಚಲನವಲನ ದಾಖಲಿಸುವ ಸಂಸ್ಥೆ ಕೆಪಿಲೆರ್ ತಿಳಿಸಿದೆ.

ಮಾರಾಟಗಾರರು ಪಾವತಿ ವಿಧಾನವನ್ನು ಬದಲಾಯಿಸಿರುವುದರಿಂದ ವ್ಯವಹಾರದಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳಲಾಗುತ್ತಿದೆ. ಮಾರಾಟಗಾರರು ಮತ್ತು ಖರೀದಿದಾರರು ಯಾರು ಎಂಬುವುದು ಸ್ಪಷ್ಟವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.