ನವದೆಹಲಿ: ಲೋಕಸಭೆಯು ಸೋಮವಾರ (ಮಾರ್ಚ್ 9) ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ.

ಸ್ಪೀಕರ್ ಓಂ ಬಿರ್ಲಾ ಅವರು ಅಂದಿನ ಕಲಾಪದ ಅಧ್ಯಕ್ಷತೆ ವಹಿಸುವುದಿಲ್ಲ. ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ಸಲ್ಲಿಸಲಾದ ನೋಟಿಸ್ ಅನ್ನು ಸದನವು ಚರ್ಚೆಗೆ ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಅವರು ಸದಸ್ಯರೊಂದಿಗೆ ಕುಳಿತುಕೊಳ್ಳಲಿದ್ದಾರೆ.

ಮಾರ್ಚ್ 9ರಂದು ಬಜೆಟ್ ಅಧಿವೇಶನದ ಎರಡನೇ ಹಂತದ ಚರ್ಚೆಗಾಗಿ ಸಂಸತ್ ಕಲಾಪ ಆರಂಭವಾಗುತ್ತಿದ್ದಂತೆ, ಬಿರ್ಲಾ ಅವರ ಪಕ್ಷಪಾತ ಧೋರಣೆ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ನಿರ್ಣಯವನ್ನು ಲೋಕಸಭೆಯು ಚರ್ಚೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

‘ಲೋಕಸಭೆಯಲ್ಲಿ ನಿರ್ಣಯದ ಬಗ್ಗೆ ಚರ್ಚಿಸುವಾಗ ಬಿರ್ಲಾ ಅವರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಹಕ್ಕಿದೆ. ನಿರ್ಣಯದ ವಿರುದ್ಧ ಮತ ಚಲಾಯಿಸುವ ಹಕ್ಕನ್ನೂ ಹೊಂದಿರುತ್ತಾರೆ’ ಎಂದು ಸಂವಿಧಾನ ತಜ್ಞ, ಲೋಕಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಆಚಾರ್ಯ ತಿಳಿಸಿದ್ದಾರೆ.

‘ಸದನದ ಮುಂದೆ ನಿರ್ಣಯ ಬಂದಾಗ ಬಿರ್ಲಾ ಅವರು ಕಲಾಪದ ಅಧ್ಯಕ್ಷತೆ ವಹಿಸುವಂತಿಲ್ಲ. ಆದರೆ, ಅವರು ಆಡಳಿತ ಪಕ್ಷದ ಸಚಿವರು ಆಸೀನರಾಗುವ ಪ್ರಮುಖ ಸಾಲಿನಲ್ಲಿ ಕುಳಿತುಕೊಳ್ಳಬಹುದು’ ಎಂದು ತಜ್ಞರು ಹೇಳಿದ್ದಾರೆ.

‘ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಮೇಲೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರಿಗೆ ಸದನದಲ್ಲಿ ಮಾತನಾಡಲು ಅನುಮತಿ ನೀಡದಿದ್ದಕ್ಕಾಗಿ ಮತ್ತು ಎಂಟು ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ಪದಚ್ಯುತಿಗೊಳಿಸುವ ನಿರ್ಣಯವನ್ನು ಮಂಡಿಸಲು ವಿರೋಧ ಪಕ್ಷದ 118 ಸದಸ್ಯರು ನೋಟಿಸ್ ನೀಡಿದ್ದರು.

ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳ ಪರವಾಗಿ ಮುಖ್ಯ ಸಚೇತಕ ಕೆ.ಸುರೇಶ್ ಅವರು ಲೋಕಸಭೆಯ ಕಾರ್ಯದರ್ಶಿಗೆ ನೋಟಿಸ್ ನೀಡಿದ್ದರು. ಆದರೆ, ಟಿಎಂಸಿ ಸಂಸದರು ನೋಟಿಸ್ಗೆ ಸಹಿ ಹಾಕಿರಲಿಲ್ಲ.

‘ಇಂತಹ ಸಂದರ್ಭಗಳಲ್ಲಿ ಸ್ಪೀಕರ್ ಕುಳಿತುಕೊಳ್ಳಬೇಕಾದ ಆಸನದ ಹಂಚಿಕೆಯ ಬಗ್ಗೆ ನಿಯಮಗಳಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಬಿರ್ಲಾ ಅವರು ಸ್ವಯಂಚಾಲಿತ ಮತದಾನ ವ್ಯವಸ್ಥೆಯ ಮೂಲಕ ನಿರ್ಣಯದ ಮೇಲೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ತಮ್ಮ ಮತವನ್ನು ದಾಖಲಿಸಲು ಚೀಟಿಯನ್ನು ಭರ್ತಿ ಮಾಡಬೇಕಾಗುತ್ತದೆ’ ಎಂದು ಆಚಾರ್ಯ ತಿಳಿಸಿದ್ದಾರೆ.

‘ರಾಜ್ಯಸಭೆಯ ಸದಸ್ಯರಾಗಿರುವ ಕೇಂದ್ರ ಸಚಿವರಿಗೆ ಸೇರಿದ ಆಸನವನ್ನು ಅವರಿಗೆ ನೀಡಬಹುದು. ಏಕೆಂದರೆ, ಲೋಕಸಭೆಯ ಸದಸ್ಯರು ಮಾತ್ರ ಈ ನಿರ್ಣಯದ ಪರ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ಸಾಧ್ಯವಿರುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.