ಬೆಂಗಳೂರು: ‘ಒಂದು ರಾಷ್ಟ್ರ–ಒಂದು ಚುನಾವಣೆ’ ಅನುಷ್ಠಾನಗೊಂಡ ನಂತರ ಯಾವುದೇ ರಾಜ್ಯದಲ್ಲಿ ಸರ್ಕಾರ ಅವಧಿಗೆ ಮೊದಲೇ ಪತನವಾಗಿ, ಇತರೆ ಪಕ್ಷಗಳು ಹೊಸ ಸರ್ಕಾರ ರಚಿಸಲು ವಿಫಲವಾದರೆ ರಾಷ್ಟ್ರಪತಿ ಆಳ್ವಿಕೆ ಬದಲು ಉಳಿದ ಮಧ್ಯಂತರ ಅವಧಿಗೆ ಮಾತ್ರ ಚುನಾವಣೆ ನಡೆಸುವ ಚಿಂತನೆ ನಡೆದಿದೆ.

‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತ ಜಂಟಿ ಸಂಸದೀಯ ಸಮಿತಿಯು ಕರ್ನಾಟಕದಲ್ಲಿ ಮೂರು ದಿನ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾರ್ವಜನಿಕರ ಜತೆ ಸಂವಾದ ನಡೆಸಿತು. ಅಂತಿಮ ದಿನವಾದ ಸೋಮವಾರ ಪದ್ಮ ಪ್ರಶಸ್ತಿ ಪುರಸ್ಕೃತರು, ಮಾಧ್ಯಮ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ ನಂತರ ಸಮಿತಿ ಅಧ್ಯಕ್ಷ ಪಿ.ಪಿ.ಚೌಧರಿ ಈ ಕುರಿತು ಮಾಹಿತಿ ನೀಡಿದರು.

‘ಈಗ ಇರುವ ನಿಯಮದಂತೆ ಅವಧಿಗೂ ಮೊದಲು ಯಾವುದೇ ರಾಜ್ಯದ ಸರ್ಕಾರ ಪತನವಾದರೆ ವಿರೋಧ ಪಕ್ಷಗಳು ಸರ್ಕಾರ ರಚನೆಯ ಹಕ್ಕು ಮಂಡಿಸಬಹುದು. ಸಾಧ್ಯವಾಗ ದಿದ್ದರೆ ರಾಷ್ಟ್ರಪತಿ ಆಡಳಿತ ಜಾರಿಗೆ ತಂದು ನಂತರ ಆರು ತಿಂಗಳ ಒಳಗೆ ಹೊಸದಾಗಿ ಚುನಾವಣೆ ನಡೆಸಲಾಗುತ್ತದೆ. ಬಹುಮತ ಪಡೆದ ಪಕ್ಷ ಐದು ವರ್ಷ ಆಡಳಿತ ನಡೆಸುತ್ತದೆ. ಈ ವ್ಯವಸ್ಥೆಯಿಂದಾಗಿ, ಪ್ರತಿ ವರ್ಷ ಕನಿಷ್ಠ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಒಂದು ರಾಷ್ಟ್ರ–ಒಂದು ಚುನಾವಣೆ ಜಾರಿಯಾದರೆ ಉಳಿದ ಮಧ್ಯಂತರ ಅವಧಿಗಷ್ಟೇ ಚುನಾಚಣೆ ನಡೆಸುವ ಕುರಿತು ಪ್ರಸ್ತಾವ ಇದೆ. ಒಮ್ಮತ ಮೂಡಿಬಂದರೆ ವರದಿಯಲ್ಲಿ ಈ ಅಂಶವೂ ಸೇರಿದಂತೆ ಹಲವು ಸಾಧ್ಯತೆಗಳನ್ನು ಸಮಿತಿ ಶಿಫಾರಸು ಮಾಡಲಿದೆ’ ಎಂದರು.

‘ಒಂದು ರಾಷ್ಟ್ರ ಒಂದು ಚುನಾವಣೆಯು ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಪೆಟ್ಟು ಕೊಡಲಿದೆ ಎಂಬ ಜೆಡಿಎಸ್ ಪಕ್ಷದ ಆತಂಕ ಅನಗತ್ಯ. ಮತದಾರರು ಪ್ರಬುದ್ಧ ರಿದ್ದಾರೆ. ಲೋಕಸಭೆಗೆ ಯಾರನ್ನು ಆಯ್ಕೆ ಮಾಡಬೇಕು, ವಿಧಾನಸಭೆಗೆ ಯಾರನ್ನು ಆಯ್ಕೆ ಮಾಡಬೇಕು. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಪ್ರತಿನಿಧಿ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ, ಪ್ರಾದೇಶಿಕ ಪಕ್ಷಗಳಿಗೆ ತೊಂದರೆಯಾಗದು’ ಎಂದು ಹೇಳಿದರು.

‘ದೇಶದಲ್ಲಿ ಪ್ರತಿ ವರ್ಷ ಐದಾರು ರಾಜ್ಯಗಳ ವಿಧಾನಸಭೆ ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತವೆ. ಅದಕ್ಕಾಗುವ ಖರ್ಚು- ವೆಚ್ಚ, ಸಮಯ ಸೇರಿದಂತೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತಿದೆ. ಒಂದೇ ಚುನಾವಣೆಯಿಂದ ದೇಶಕ್ಕೆ ಹಲವು ಅನುಕೂಲಗಳಿವೆ. ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಆಗುತ್ತಿರುವ ಒಟ್ಟು ವೆಚ್ಚದಲ್ಲಿ, ಸುಮಾರು ₹7.50 ಲಕ್ಷ ಕೋಟಿಯಷ್ಟು ಉಳಿತಾಯ ಮಾಡಬಹುದು’ ಎಂದರು.

‘ಒಂದು ಚುನಾವಣೆಯು ಒಂದು ರಾಷ್ಟ್ರ– ಒಂದು ಪಕ್ಷ ಎಂಬ ಭವಿಷ್ಯದ ಕಾರ್ಯಸೂಚಿಯ ಭಾಗವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 1950ರಿಂದ 1967ರ ಅವಧಿಯಲ್ಲಿ ನಾಲ್ಕು ಬಾರಿ ಇಡೀ ದೇಶದಲ್ಲಿ ಒಟ್ಟಿಗೇ ಚುನಾವಣೆಗಳು ನಡೆದವು. ಆಗ ಸಮಸ್ಯೆ ಇರಲಿಲ್ಲವೇ?’ ಎಂದು ಮರು ಪ್ರಶ್ನಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-4-1913485159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.