ಬೆಂಗಳೂರು: ‘ಒಂದು ದೇಶ–ಒಂದು ಚುನಾವಣೆ’ ಕುರಿತಾಗಿ ರಾಜಕೀಯ ಪಕ್ಷಗಳು ಸಲ್ಲಿಸಿರುವ ಎಲ್ಲ ಸಲಹೆ ಮತ್ತು ಮನವಿಗಳನ್ನು ಶಿಫಾರಸಿನಲ್ಲಿ ಸೇರಿಸುತ್ತೇವೆ’ ಎಂದು ಸಂವಿಧಾನದ 129ನೇ ತಿದ್ದುಪಡಿ ಮೇಲಿನ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಪಿ.ಪಿ.ಚೌಧರಿ ತಿಳಿಸಿದರು.

ಜಂಟಿ ಸಂಸದೀಯ ಸಮಿತಿಯು ದೇಶದ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ. ಈ ಭಾಗವಾಗಿ ರಾಜ್ಯದ ಪ್ರಮುಖ ಪಕ್ಷಗಳ ಜತೆಗೆ ಶನಿವಾರ ಸಭೆ ನಡೆಸಿತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಎಪಿ ಸೇರಿ ಹಲವು ಪಕ್ಷಗಳು ಸಭೆಯಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದವು.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೌಧರಿ, ‘ಒಂದು ದೇಶ–ಒಂದು ಚುನಾವಣೆಯ ಅನುಕೂಲಗಳ ಬಗ್ಗೆ ಪಕ್ಷಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಎಲ್ಲರೂ ತಮ್ಮ–ತಮ್ಮ ಅಭಿಪ್ರಾಯ ಮತ್ತು ನಿಲುವನ್ನು ಸಭೆಯಲ್ಲಿ ಮಂಡಿಸಿದವು’ ಎಂದರು.

‘ಒಂದು ಚುನಾವಣೆಯಿಂದ ದೇಶಕ್ಕೆ ಹಲವು ಅನುಕೂಲಗಳಿವೆ. ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಸಲು ಆಗುತ್ತಿರುವ ಒಟ್ಟು ವೆಚ್ಚದಲ್ಲಿ, ಸುಮಾರು ₹7.50 ಲಕ್ಷ ಕೋಟಿಯಷ್ಟು ಉಳಿತಾಯ ಮಾಡಲು ಒಂದು ದೇಶ–ಒಂದು ಚುನಾವಣೆಯಿಂದ ಸಾಧ್ಯವಾಗಲಿದೆ’ ಎಂದರು.

‘ಒಂದು ದೇಶ–ಒಂದು ಚುನಾವಣೆ’ಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಮನವಿ ಸಲ್ಲಿಸಿದೆ. ಸಂಸದ ಮಲ್ಲೇಶ್ ಬಾಬು ನೇತೃತ್ವದಲ್ಲಿ ಜೆಡಿಎಸ್ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.