ನವದೆಹಲಿ (ಪಿಟಿಐ): ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಗುರುವಾರ ಒಂದು ವರ್ಷ ಪೂರೈಸಿದೆ.

ಕಾರ್ಯಾಚರಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ ಸಂದೇಶ ಹಂಚಿಕೊಂಡಿದ್ದು, ‘ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವು ಮತ್ತು ರಾಷ್ಟ್ರ ಭದ್ರತೆಯ ದೃಢ ಸಂಕಲ್ಪವನ್ನು ಆಪರೇಷನ್ ಸಿಂಧೂರ ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ.

‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನೆನಪಿನ ನಿಮಿತ್ತ ರಕ್ಷಣಾ ಸಚಿವ ರಾಜನಾಥ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಸಚಿವರು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಫೋಟೋ ಬದಲಿಸಿ, ‘ಆಪರೇಷನ್ ಸಿಂಧೂರ’ ಚಿಹ್ನೆಯನ್ನು ಹಾಕಿಕೊಂಡಿದ್ದಾರೆ.

ಭದ್ರತಾಪಡೆಗಳಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಪ್ರೊಫೈಲ್ ಫೋಟೊ ಬದಲಿಸಿ, ಸಿಂಧೂರ ಚಿಹ್ನೆ ಬಳಸುವಂತೆ ಎಲ್ಲರಿಗೂ ಪ್ರಧಾನಿ ಮೋದಿ ಕರೆ ನೀಡಿದ್ದರು.

ವಿಶೇಷ ಪ್ರಾರ್ಥನೆ: ಜಮ್ಮು–ಕಾಶ್ಮೀರದ ಪೂಂಚ್ ಜಿಲ್ಲೆಯ ಗುರುದ್ವಾರ ಶ್ರೀ ಗುರು ಸಿಂಗ್ ಸಭಾದಲ್ಲಿ ಜನರು ಗುರುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶಾಂತಿಗಾಗಿ ಪ್ರಾರ್ಥಿಸಿದರು. ಜತೆಗೆ ಗಡಿಭಾಗದಲ್ಲಿ ಹತ್ಯೆಗೀಡಾದವರನ್ನೂ ಸ್ಮರಿಸಿದ್ದಾರೆ.ಪೂಂಚ್ ಜಿಲ್ಲೆಯಲ್ಲಿ 12 ಮಂದಿ ಮೃತಪಟ್ಟಿದ್ದರು.

ನಾಶ ಖಚಿತ: ‘ಯಾವ ಭಯೋತ್ಪಾದಕ ನೆಲೆಯೂ ಸುರಕ್ಷಿತವಲ್ಲ ಅವುಗಳನ್ನೂ ನಾಶಪಡಿಸಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ‘ಸಿಂಧೂರ’ ಕಾರ್ಯಾಚರಣೆ ನೀಡಿದೆ. ಇದು ಕೇವಲ ಅಂತ್ಯವಲ್ಲ, ಆರಂಭ’ ಎಂದು ಭಾರತೀಯ ಭದ್ರತಾಪಡೆಗಳು ಹೇಳಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-1271368557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.