ನವದೆಹಲಿ: ಲೋಕಸಭೆಗೆ ಡೆಪ್ಯುಟಿ ಸ್ಪೀಕರ್ ನೇಮಕ ಮಾಡದಿರುವುದು ಸೇರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಕಾರ್ಯವೈಖರಿ ಪ್ರತಿಭಟಿಸಿ ರಾಜ್ಯಸಭಾ ಉಪಸಭಾಪತಿ ಚುನಾವಣೆ ಬಹಿಷ್ಕರಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಮೊದಲನೆಯದಾಗಿ ಏಳು ವರ್ಷಗಳು ಕಳೆದರೂ ಲೋಕಸಭೆಗೆ ಡೆಪ್ಯುಟಿ ಸ್ಪೀಕರ್ ನೇಮಕ ಮಾಡಿಲ್ಲ. ಈ ರೀತಿ ಹಿಂದೆಂದೂ ಆಗಿರಲಿಲ್ಲ’ ಎಂದಿದ್ದಾರೆ.

‘ಎರಡನೆಯದಾಗಿ ಉಪಸಭಾಪತಿ ಹರಿವಂಶ್ ಅವರ ಅವಧಿ ಏಪ್ರಿಲ್ 9ಕ್ಕೆ ಅಂತ್ಯಗೊಂಡಿತ್ತು. ಮಾರನೇ ದಿನವೇ ರಾಷ್ಟ್ರಪತಿಯವರು ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದರು. ಈಗ ಅವರು ಮೂರನೇ ಅವಧಿಗೆ ಉಪಸಭಾಪತಿ ಸ್ಥಾನದ ಎನ್ಡಿಎ ಅಭ್ಯರ್ಥಿಯಾಗಿದ್ದಾರೆ’ ಎಂದಿದ್ದಾರೆ.

‘ಕೊನೆಯದಾಗಿ, ವಿರೋಧ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಈ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂರು ಕಾರಣಗಳು ಹಾಗೂ ಕೇಂದ್ರದ ಕಾರ್ಯವೈಖರಿಗೆ ಪ್ರತಿಭಟನೆ ವ್ಯಕ್ತಪಡಿಸುವಉದ್ದೇಶದಿಂದ ಉಪಸಭಾಪತಿ ಚುನಾವಣೆಯನ್ನು ಬಹಿಷ್ಕರಿಸಲು ವಿಪಕ್ಷಗಳು ನಿರ್ಧರಿಸಿವೆ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಏಪ್ರಿಲ್ 17ರಂದು ರಾಜ್ಯಸಭಾ ಉಪಸಭಾಪತಿ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.