ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಚಿವಾಲಯದ ಸಮಿತಿಗೆ ಅದಾನಿ ಸಮೂಹದ ಉದ್ಯೋಗಿಯ ನೇಮಕ: ವಿಪಕ್ಷಗಳ ಕಿಡಿ

Published 14 ನವೆಂಬರ್ 2023, 11:32 IST
Last Updated 14 ನವೆಂಬರ್ 2023, 11:32 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಪರಿಸರ ಸಚಿವಾಲಯದ ಅಧೀನದಲ್ಲಿ ಬರುವ ತಜ್ಞರ ಮೌಲ್ಯಮಾಪನ ಸಮಿತಿಗೆ ಗೌತಮ್ ಅದಾನಿ ಕಂಪನಿಯ ಉದ್ಯೋಗಿ ಜನಾರ್ಧನ ಚೌಧರಿ ಅವರನ್ನು ನೇಮಕ ಮಾಡಿದ್ದನ್ನು ವಿರೋಧ ಪಕ್ಷಗಳು ಟೀಕೆ ಮಾಡಿವೆ.

‘ಅದಾನಿಯ ಪ್ರಧಾನ ಸೇವಕ, ಅದಾನಿ ಉದ್ಯೋಗಿ ಜನಾರ್ದನ ಚೌಧರಿ ಅವರನ್ನು ಪರಿಸರ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿಗೆ ನೇಮಕ ಮಾಡಿದ್ದಾರೆ. ಈ ಸಮಿತಿಯು ಅದಾನಿಯ 6 ಯೋಜನೆಗಳಿಗೆ (10,300 ಮೆಗಾವ್ಯಾಟ್ ಸಾಮರ್ಥ್ಯದ) ಅನುಮೋದನೆ ನೀಡಲಿದೆ’ ಎಂದು ಕೇರಳ ಕಾಂಗ್ರೆಸ್‌ ಘಟಕವು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದೆ.

ಅಲ್ಲದೆ ಇತ್ತೀಚೆಗೆ ಮಹಾರಾಷ್ಟ್ರದ ಸತಾರದಲ್ಲಿ 1500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್‌ ಸ್ಥಾವರಕ್ಕೆ ಇವರೇ ಒಪ್ಪಿಗೆ ನೀಡಿದ್ದಾರೆ ಎಂದು ಆರೋಪಿಸಿದೆ. ಇದು ವ್ಯಾಪಾರವನ್ನು ಸುಲಭಗೊಳಿಸುವ ವಿಧಾನ ಎಂದು ವ್ಯಂಗ್ಯವಾಡಿದೆ.

ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನ ಸಲಹೆಗಾರರಾಗಿರುವ ಚೌಧರಿಯವನ್ನು ಅದಾನಿ ಸಮೂಹದ ಜಲವಿದ್ಯುತ್ ಯೋಜನೆ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಿರುವ ಪರಿಸರ ಸಚಿವಾಲಯದ ಮೌಲ್ಯಮಾಪನ ಸಮಿತಿಗೆ ಸೆಪ್ಟೆಂಬರ್‌ನಲ್ಲಿ 27ರಂದು ನೇಮಕ ಮಾಡಲಾಗಿದೆ.

ಸರ್ಕಾರ ಒಪ್ಪಿಗೆ ನೀಡುವುಕ್ಕೂ ಮುನ್ನ ಈ ಸಮಿತಿಯು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಿದೆ.

ಶಿವಸೇನಾ (ಯಟಿಬಿ) ಹಾಗೂ ತೃಣಮೂಲ ಕಾಂಗ್ರೆಸ್‌ ಕೂಡ ಸರ್ಕಾರದ ಈ ನಡೆಯನ್ನು ಟೀಕಿಸಿದೆ. ದೋಸ್ತಿ ಎಂದರೆ ಹೀಗಿರಬೇಕು ಎಂದು ಶಿವಸೇನಾದ ರಾಜ್ಯಸಭೆ ಸದಸ್ಯೆ ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT