ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಪೇ ಚರ್ಚೆ: 5 ಆವೃತ್ತಿಗಳಿಗೆ ₹28 ಕೋಟಿ ಖರ್ಚು

Last Updated 6 ಫೆಬ್ರುವರಿ 2023, 12:44 IST
ಅಕ್ಷರ ಗಾತ್ರ

ನವದೆಹಲಿ : ಪ್ರಧಾನಿ ಮೋದಿಯವರು ಮಕ್ಕಳು ಮತ್ತು ಪೋಷಕರೊಂದಿಗೆ ನಡೆಸುವ ಪರೀಕ್ಷೆಯ ಮೇಲಿನ ಚರ್ಚೆಯ (ಪರೀಕ್ಷಾ ಪೇ ಚರ್ಚಾ) ಐದು ಆವೃತ್ತಿಗಳಿಗೆ ₹28 ಕೋಟಿಗೂ ಅಧಿಕ ವೆಚ್ಚವಾಗಿದೆ ಎಂದು ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.

ಲೋಕಸಭೆಯಲ್ಲಿ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ಅವರು ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದು, ಮೊದಲ ಆವೃತ್ತಿಗೆ 2018ರಲ್ಲಿ ₹3.37 ಕೋಟಿ, 2019ರಲ್ಲಿ ₹ 4.93ಕೋಟಿ, 2020ರಲ್ಲಿ ₹5.69 ಕೋಟಿ, 2021ರಲ್ಲಿ ₹6ಕೋಟಿ ವೆಚ್ಚ ಹಾಗೂ 2022ರಲ್ಲಿ ₹8.61 ಕೋಟಿ ಹಣ ವ್ಯಯಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದರೆ 2023ರ 6ನೇ ಆವೃತ್ತಿಯ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ.

6ನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ವಾರ್ಷಿಕ ಸಂವಾದವು 2023ರ ಜ.27ರಂದು ನವದೆಹಲಿಯ ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT